Monday, December 23, 2024

3 ತಿಂಗಳ ಮುಂಚೆ ವಿಪಕ್ಷ ನಾಯಕನ ಆಯ್ಕೆ ಮಾಡಬೇಕಿತ್ತು : ಮಾಜಿ ಸಿಎಂ ಡಿ.ವಿ. ಸದಾನಂದಗೌಡ

ಬೆಂಗಳೂರು : ವಿರೋಧ ಪಕ್ಷದ ನಾಯಕನಾಗಿ ಆರ್. ಅಶೋಕ್ ಅವರನ್ನು ಆಯ್ಕೆ ಮಾಡಿರುವ ವಿಚಾರವಾಗಿ ಮಾಜಿ ಸಿಎಂ ಡಿ.ವಿ. ಸದಾನಂದಗೌಡ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೂರು ತಿಂಗಳ ಮುಂಚೆಯೇ ವಿಪಕ್ಷ ನಾಯಕನ ಘೋಷಣೆ ಮಾಡಬೇಕಿತ್ತು. ಆಗ ಘೋಷಣೆ ಮಾಡಿದ್ದರೆ ಬಿಜೆಪಿ ಇನ್ನೂ ಶಕ್ತಿಯುತವಾಗುತ್ತಿತ್ತು ಎಂದು ಹೇಳಿದ್ದಾರೆ.

ವಿಪಕ್ಷ ನಾಯಕನ ಆಯ್ಕೆ ವಿಳಂಬ ಬಗ್ಗೆಯೇ ವರಿಷ್ಠರ ಮೇಲೆ ಕೋಪ ಇದ್ದಿತ್ತು. ಈಗ ಆ ಕೋಪ ಶಮನ ಆಗಿದೆ. ಯೋಗ್ಯರಾದವರನ್ನೇ ವಿಪಕ್ಷ ನಾಯಕ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ. ನಾನು, ಅಶೋಕ್ ಸೇರಿ ಎಲ್ಲರೂ ಒಟ್ಟಾಗಿ ದುಡಿಯುತ್ತೇವೆ. ಅಶೋಕ್, ವಿಜಯೇಂದ್ರ ಎಲ್ಲರ ವಿಶ್ವಾಸಗಳಿಸುವ ಕೆಲಸ ಮಾಡುತ್ತಿದ್ದಾರೆ. ಪಕ್ಷದಲ್ಲಿ ಇದ್ದ ಆಂತರಿಕ ಗೊಂದಲ ನಿಭಾಯಿಸುವ ಶಕ್ತಿ ಇವರಿಗೆ ಇದೆ ಎಂದು ತಿಳಿಸಿದ್ದಾರೆ.

ಮುಂದೆ ಅಶೋಕ್ ಸಿಎಂ ಆಗಲಿ

ಮುಂದೆ ಅಶೋಕ್ ಸಿಎಂ ಆಗಲಿ, ಅವರಿಗೆ ಅನುಭವದ ಕೊರತೆ ಇಲ್ಲ. ಶಾಸಕ ಬಸನಗೌಡ ಪಾಟೀಲ್​​ ಯತ್ನಾಳ್, ಮಾಜಿ ಸಚಿವ ವಿ. ಸೋಮಣ್ಣ ಅಸಮಾಧಾನವನ್ನು ಸರಿಪಡಿಸುವ ಶಕ್ತಿ ಇದೆ. ಅಶೋಕ್ ಮೇಲೆ ಕೋಪ ಇಲ್ಲ, ಆದರೆ ಕೆಲವರ ಮೇಲೆ ಸ್ವಲ್ಪ ಬೇಸರವಿದೆ. ನಮ್ಮ ಬಳಿ ಬೆಣ್ಣೆ ಇದೆ, ಅದನ್ನು ಹಚ್ಚಿ ಅತೃಪ್ತರನ್ನು ಸಮಾಧಾನಪಡಿಸುತ್ತೇವೆ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES