Thursday, December 19, 2024

ಸೊಂಟ ಮುರಿದ ಅಜ್ಜಿಗೆ ಶಾಸಕ ರಂಗನಾಥ್​ ರಿಂದ ಯಶಸ್ವಿ ಶಸ್ತ್ರಚಿಕಿತ್ಸೆ!

ಕುಣಿಗಲ್: ಜನಸೇವೆಯೇ ಜನಾರ್ದನ ಸೇವೆ ಅನ್ನೋದು ಎಲ್ಲರಿಗೂ ಗೊತ್ತಿದೆ‌. ಅದ್ರೆ ಕುಣಿಗಲ್ ಕ್ಷೇತ್ರದ ಶಾಸಕ ರಂಗನಾಥ್ ಒಂದು ಕಡೆ ಜನ ಸೇವೆ ಮತ್ತೊಂದು ಕಡೆ ವೃತ್ತಿ ಧರ್ಮವನ್ನ ಕೂಡಾ ಕಾಪಾಡುತ್ತಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಮತ್ತು ವೈದ್ಯ ರಂಗನಾಥ್​, ಇಂದು ಹುತ್ರಿದುರ್ಗ ಹೋಬಳಿಯ ಕಲ್ಲಯ್ಯನಪಾಳ್ಯ ಗ್ರಾಮದ ತಿಮ್ಮಮ್ಮ ಎಂಬ ವಯೋವೃದ್ಧ ಅಜ್ಜಿಯೊಬ್ಬರು ಬಿದ್ದು ಸೊಂಟ ಗಾಯಗೊಂಡ ಪರಿಣಾಮ ಶಸ್ತ್ರಚಿಕಿತ್ಸೆ ಮಾಡಬೇಕೆಂದು ವೈದ್ಯರು ತಿಳಿಸಿದ್ದರು, ತಿಮ್ಮಮ್ಮನ ಕುಟುಂಬ ನನಗೆ ತಿಳಿಸಿದಾಕ್ಷಣವೇ ಬೋರಿಂಗ್ ಆಸ್ಪತ್ರೆಗೆ ಆ ಅಜ್ಜಿಯನ್ನು ಸೇರಿಸಿ ನನ್ನ ವೈದ್ಯ ವೃತ್ತಿಯ ಸ್ನೇಹಿತರೊಡಗೂಡಿ ಇಂದು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿಸಿದೆ.

ಇದನ್ನೂ ಓದಿ: ವಿಶ್ವಕಪ್​ ಟ್ರೋಫಿಗೆ ಅವಮಾನ: ಮಾರ್ಷ್​ ವಿರುದ್ದ ಕ್ರಿಕೆಟ್​ ಪ್ರೇಮಿಗಳು ಗರಂ!

ಶಾಸಕನಾಗಿ ನನ್ನ ಅಭಿವೃದ್ಧಿ ಕೆಲಸಗಳ ನಡುವೆಯೂ ಇಂತಹ ಮಹತ್ಕಾರ್ಯಕ್ಕೆ ನನ್ನನ್ನು ನಾನು ತೊಡಗಿಸಿಕೊಂಡು ಬಡಜನರಿಗೆ ನೆರವಾಗುತ್ತಿರುವುದು ನನಗೆ ವೈಯಕ್ತಿಕವಾಗಿ ಖುಷಿ ತಂದಿದೆ ಎಂದು  ಹೇಳುವ ಮೂಲಕ ತಾವು ಮಾಡಿದ ಸೇವೆಯನ್ನ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES