ಬೀದರ್ : ಇಸ್ರೋ ಅಧ್ಯಕ್ಷ ಎಸ್. ಸೋಮನಾಥರಿಗೆ ‘ಅನುಭವ ಮಂಟಪ ರಾಷ್ಟ್ರೀಯ ಪ್ರಶಸ್ತಿ’ ನೀಡಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ ಸಚಿವ ಈಶ್ವರ್ ಖಂದ್ರೆ ಹೇಳಿದರು.
ಬೀದರ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅನುಭವ ಮಂಟಪದ ಉತ್ಸವದ ಶರಣ ಕಮ್ಮಟ 44 ವರ್ಷದಿಂದ ಸತತವಾಗಿ ನಡೆದುಕೊಂಡು ಬರುತ್ತಿದೆ. ಇದೇ ತಿಂಗಳು 25 ಮತ್ತು 26 ರಂದು ಬಸವಕಲ್ಯಾಣದಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಅನುಭವ ಮಂಟಪ ಅನುದಾನ ನೀಡುವಲ್ಲಿ ಕಾಂಗ್ರೆಸ್ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂಬ ಕೇಂದ್ರ ಸಚಿವ ಭಗವಂತ ಖೂಬಾ ಆರೋಪಕ್ಕೆ ತೀರುಗೇಟು ನೀಡಿದರು. ಅನುಭವ ಮಂಟಪ ಕಾಮಗಾರಿ ವಿಚಾರಕ್ಕೆ ರಾಜಕೀಯ ಹೇಳಿಕೆ ನೀಡೋದು ಖಂಡನೀಯ. ಒಬ್ಬ ಸಂಸದರು, ಕೇಂದ್ರ ಮಂತ್ರಿಯಾಗಿ ಜನರ ದಾರಿ ತಪ್ಪಿಸೋದು ಬಿಡಬೇಕು. ಈಗಾಗಲೇ ಕಾಂಗ್ರೆಸ್ ಸರ್ಕಾರ ಬಂದ ಮೇಲೆ 40 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿ ಬಿಲ್ ಪಾವತಿ ಮಾಡಿದೆ ಎಂದರು.
ಅನುಭವ ಮಂಟಪಕ್ಕೆ 600 ಕೋಟಿ
ಅನುಭವ ಮಂಟಪ ಕಾಮಗಾರಿ ಯಾವುದೇ ಹಣಕಾಸಿನ ತೊಂದರೆ ಇಲ್ಲ. ಈಗಾಗಲೇ ಟೆಂಡರ್ ಆಗಿರುವ 500 ರಿಂದ 600 ಕೋಟಿಯಲ್ಲಿ ವೇಗದ ಗತಿಯಲ್ಲಿ ಕಾಮಗಾರಿ ನಡೆಯುತ್ತಿದೆ. ಎರಡ್ಮೂರು ಸಲ ನಾನು ಸಹ ಕಾಮಗಾರಿ ವೀಕ್ಷಣೆ ಮಾಡಿದ್ದೇನೆ. ನಿಗದಿತ ಸಮಯದಲ್ಲಿ ಅನುಭವ ಮಂಟಪದ ಕಾಮಗಾರಿ ಪೂರ್ಣಗೊಳಿಸಿ, ಉದ್ಘಾಟನೆ ಮಾಡಲಾಗುದು ಎಂದು ಭರವಸೆ ನೀಡಿದರು.
ಬೆದರಿಕೆ ಹಾಕುವವರಿಗೆ ಕಾನೂನು ಕ್ರಮ
ಸಾಹಿತಿಗಳು ಚಿಂತಕರ ಹತ್ಯೆ ಹಾಗೂ ಬೆದರಿಕೆ ವಿಚಾರ ಕುರಿತು ಮಾತನಾಡಿ, ಇದನ್ನೂ ನಾನು ತೀವ್ರವಾಗಿ ಖಂಡಿಸುತ್ತೇನೆ. ಚಿಂತಕರು, ಮಠಾಧೀಶರಿಗೆ ಬೆದರಿಕೆ ಹಾಕುವವರಿಗೆ ನಮ್ಮ ಸರ್ಕಾರದ ಅತ್ಯಂತ ಕಠಿಣ ಕಾನೂನು ಕ್ರಮ ಜರುಗಿಸುತ್ತದೆ ಎಂದು ಹೇಳಿದರು.