Monday, December 23, 2024

ವಿಜಯೇಂದ್ರ, ಅಶೋಕ್ ಮುಂದೆ ಕುಮಾರಸ್ವಾಮಿ ‘ಕೈ’ ಕಟ್ಟಿ ನಿಲ್ಲಬೇಕಾ? : ಸಿ.ಎಂ ಇಬ್ರಾಹಿಂ

ಬೆಂಗಳೂರು : ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಈಗಾಗಲೇ ಮಾಲೆ ಹಾಕ್ಕೊಂಡಿದ್ದಾರೆ. ‘ಸ್ವಾಮಿಯೇ ಅಮಿತ್ ಶಾ ಅಪ್ಪ’ ಅಂತ ಹೇಳ್ತಾರೆ. ಸಿ.ಟಿ. ರವಿನೂ ಫ್ರೀ ಇದ್ದಾನೆ, ಕರ್ಕೊಂಡ್ ಹೋಗಿ ಎಂದು ಜೆಡಿಎಸ್ ಮಾಜಿ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಕುಟುಕಿದರು.

ದತ್ತ ಮಾಲೆ ಹಾಕುವ ವಿಚಾರ ಕುರಿತು ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ನೀವು ಮಾಲೆ ಹಾಕೋದು ತಪ್ಪಲ್ಲ. ನಾನು ದೊಡ್ಡ ಹಿಂದೂ ಅಂತ ಅಮಿತ್ ಶಾಗೆ ತೋರಿಸಲು ಹೊರಟಿದ್ದೀರಿ. ದೇವೇಗೌಡರನ್ನು ಕರ್ಕೊಂಡ್ ಹೋಗಿ ಬನ್ನಿ, ದತ್ತ ಮಾಲೆ ಹಾಕಿಕೊಂಡು ಬಂದು ಗೆದ್ದು ಬನ್ನಿ ಎಂದು ಚಾಟಿ ಬೀಸಿದರು.

ದೇವೇಗೌಡರು ಪ್ರಧಾನಿ ಆದವ್ರು, ಪಾರ್ಟಿಯನ್ನು ನಡೆಸಿದ್ದಾರೆ. ಅವರು ತಪ್ಪುಗಳ ಮೇಲೆ ತಪ್ಪು ಮಾಡ್ತಿದ್ದಾರೆ. 2-3 ಸದಸ್ಯರು ಸೇರಿ ನನ್ನ ತೆಗೆಯಬೇಕು. ಆದ್ರೆ, ತಪ್ಪು ಮಾಡಿದ್ದಾರೆ. ರಾಷ್ಟ್ರೀಯ ಸಮಿತಿ ಸಭೆ ಕೆರೆದಿದ್ರು, ನನ್ನನ್ನು ಕರೆದಿಲ್ಲ. ದೇವೇಗೌಡರಿಗೆ ಇನ್ನೊಂದು ಅವಕಾಶ ಕೊಡೋಣ ಅಂತ ಚರ್ಚೆಯಾಗಿದೆ. 9ನೇ ತಾರೀಖಿನೊಳಗೆ ಮೈತ್ರಿ ನಿಲುವು ಬದಲಾಯಿಸಬೇಕು ಎಂದು ಹೇಳಿದರು.

ಒಬ್ಬ ಮಗನಿಗೆ ಎಷ್ಟು ಜನರನ್ನ ಬಲಿ ಕೊಡಬೇಕು?

ಬೆಂಗಳೂರಿನಲ್ಲಿ ಸಭೆ ಮಾಡುವ ಬಗ್ಗೆ ಚರ್ಚೆ ಮಾಡಲಾಗಿದೆ. ನನ್ನನ್ನ ತೆಗೆದಿದ್ದು ತಪ್ಪು, ನ್ಯಾಯಾಲಯಕ್ಕೆ ಹೋಗುತ್ತೇನೆ. ಯಾರನ್ನು ಕೇಳದೆಯೇ ಅಮಿತ್ ಶಾ ಬಳಿ ‌ಹೋಗಿದ್ದಕ್ಕೆ ಕುಮಾರಸ್ವಾಮಿ ಅವರನ್ನ ತೆಗೆಯಬೇಕಿತ್ತು. ಒಬ್ಬ ಮಗನಿಗೆ ಎಷ್ಟು ಜನರನ್ನ ಬಲಿ ಕೊಡಬೇಕು? ದಸರಾ ಆದ್ಮೇಲೆ ಕರಿತೀನಿ ಅಂದ್ರು ಕರೆದ್ರಾ? ವಿಜಯೇಂದ್ರ, ಆರ್. ಅಶೋಕ್ ಮುಂದೆ ಕುಮಾರಸ್ವಾಮಿ ಕೈ ಕಟ್ಟಿ ನಿಲ್ಲಬೇಕಾ? ಬಿಜೆಪಿಗರಿಗೆ ಬೇಕಿಲ್ಲ, ಇವರೇ ಮೈ ಮೇಲೆ ಬಿದ್ದು ಹೋಗ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

RELATED ARTICLES

Related Articles

TRENDING ARTICLES