ಬೆಂಗಳೂರು: ಸರ್ಕಾರದ ವಿರುದ್ದ ಅಂಗನವಾಡಿ ಕಾರ್ಯಕರ್ತೆಯರು ಮತ್ತೆ ಸಿಡಿದೆದ್ದು, ಇಂದು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲು ಸಜ್ಜಾಗಿದ್ದಾರೆ. ಅಂಗನವಾಡಿಗಳಿಗೆ ಸಹಾಯಕಿರನ್ನು ನೇಮಿಸುವಂತೆ ಒತ್ತಾಯಿಸಿ, ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಅನಿರ್ದಿಷ್ಟಾವದಿ ಪ್ರತಿಭಟನೆ ನಡೆಸಲು ಕಾರ್ಯಕರ್ತೆಯರು ಮುಂದಾಗಿದ್ದಾರೆ.
ಕಳೆದೆ ಹಲವು ವರ್ಷಗಳಿಂದ ಅಂಗನವಾಡಿ ಸಹಾಯಕಿಯರ ನೇಮಕಾತಿ ವಿಳಂಬ ಆಗುತ್ತಿದ್ದು, ಬೆಂಗಳೂರು ಜಿಲ್ಲೆಯಲ್ಲಿ 2877 ಅಂಗನವಾಡಿ ಕೇಂದ್ರಗಳು ಇವೆ. ಅದರಲ್ಲಿ 1198 ಸಹಾಕಿಯರ ಹುದ್ದೆ ಖಾಲಿ ಇದ್ದು, ಅನೇಕ ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತೆಯರು ನೇಮಕಾತಿಯಲ್ಲಿ ವಿಳಂಬ ಆಗುತ್ತಿದೆ ಎಂದು ಕಾರ್ಯಕರ್ತೆಯರು ಬೇಸರಗೊಂಡಿದ್ಧಾರೆ.
ಇದನ್ನೂ ಓದಿ: ಅಂಗಿ ತೋಳು ಕತ್ತರಿಸಿಕೊಂಡು ಪರೀಕ್ಷೆಗೆ ಹಾಜರ್ ಆದ ಅಭ್ಯರ್ಥಿ!
ಇನ್ನೂ ನೇಮಕಾತಿ ಬೇಡಿಕೆಯ ಜೊತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸರ್ಕಾರದ ವಿರುದ್ದ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆಗೆ ಕರೆ ಕೊಟ್ಟಿದ್ದಾರೆ.