Wednesday, January 22, 2025

ಬೆಂಗಳೂರಿನ 110 ಹಳ್ಳಿಗಳಿಗೆ ಕಾವೇರಿ ನೀರು ಪೈರೈಕೆ ಇಲ್ಲ!

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 110 ಹಳ್ಳಿಗಳಿಗೆ ಜನವರಿಗೂ ಕಾವೇರಿ ನೀರು ದೊರೆಯುವುದು ಅಸಾಧ್ಯವಾಗಿದ್ದು, ಇದರಿಂದ ಈ ಹಳ್ಳಿಗಳ ಜನರಿಗೆ ಇನ್ನಷ್ಟು ದಿನ ಕೊಳವೆಬಾವಿ ನೀರೇ ಗತಿಯಾಗಲಿದೆ.

ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ಕಾವೇರಿ ನೀರು ಪೂರೈಸುವ 5ನೇ ಹಂತದ ಯೋಜನೆಯನ್ನು 2024 ಜನವರಿಗೆ ಅನುಷ್ಠಾನಗೊಳಿಸುವುದಾಗಿ ಬೆಂಗಳೂರು ಜಲಮಂಡಳಿ ತಿಳಿಸಿತ್ತು. ಆದರೆ, ಇನ್ನೂ ಶೇ.20ರಷ್ಟು ಕೆಲಸಗಳು ಬಾಕಿಯಿರುವ ಕಾರಣ, ಇಲ್ಲಿನ ಜನರಿಗೆ ಕಾವೇರಿ ನೀರು ಸಿಗಲು ಮತ್ತಷ್ಟು ದಿನಗಳು ಕಾಯಬೇಕಿದೆ.

ಇದನ್ನೂ ಓದಿ: ಮತ್ತೆ ಗಗನಕ್ಕೇರಿದ ಈರುಳ್ಳಿ ಬೆಲೆ!

110 ಹಳ್ಳಿಗಳು ಬಿಬಿಎಂಪಿ ವ್ಯಾಪ್ತಿಗೆ ಸೇರಿ 15 ವರ್ಷಗಳಾಗಿವೆ. 2007ರಲ್ಲಿ 5 ವಲಯಗಳಾದ ಬೊಮ್ಮನಹಳ್ಳಿ ವಲಯಕ್ಕೆ 33, ಮಹದೇವಪುರಕ್ಕೆ 23, ರಾಜರಾಜೇಶ್ವರಿ ನಗರಕ್ಕೆ 17, ದಾಸರಹಳ್ಳಿಗೆ 11 ಮತ್ತು ಬ್ಯಾಟರಾಯನಪುರ ವಲಯಕ್ಕೆ 26 ಹಳ್ಳಿಗಳನ್ನು ಸೇರ್ಪಡೆ ಮಾಡಲಾಯಿತು. ಈ ಹಳ್ಳಿಗಳಿಗೆ ಕಾವೇರಿ ನೀರು ಪೂರೈಸುವ 5ನೇ ಹಂತದ ಯೋಜನೆ ಆರಂಭವಾಗಿ ಐದು ವರ್ಷಗಳಾದರೂ ಕಾವೇರಿ ನೀರಿನ ಭಾಗ್ಯ ಮಾತ್ರ ಸಿಕ್ಕಿಲ್ಲ.

RELATED ARTICLES

Related Articles

TRENDING ARTICLES