Monday, December 23, 2024

ರೈಲು ಟಿಕೆಟ್ ಬೆಲೆಗಳ ಮೇಲೆ ವಿಧಿಸುವ ಹೆಚ್ಚಿನ ದರವನ್ನು ಹಿಂಪಡೆಯಬೇಕು : ಸಿಎಂ ಮಮತಾ ಬಾನ್ಯರ್ಜಿ

ಪಶ್ಚಿಮ ಬಂಗಾಳ : ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷತೆ ಒದಗಿಸಬೇಕು. ರೈಲು ಟಿಕೆಟ್ ಬೆಲೆಗಳ ಮೇಲೆ ವಿಧಿಸುವ ಹೆಚ್ಚಿನ ದರವನ್ನು ಹಿಂಪಡೆಯಬೇಕು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬಾನ್ಯರ್ಜಿ ಹೇಳಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್​​ನಲ್ಲಿ ಬರೆದುಕೊಂಡಿರುವ ಅವರು, ಕೆಲವೊಮ್ಮೆ ರೈಲು ದರಗಳು ವಿಮಾನ ದುಬಾರಿಯಾಗಿರುತ್ತವೆ. ರೈಲಿನ ದರಗಳು ದುಬಾರಿಯಾದರೆ ಪ್ರಯಾಣಿಕರು ಹೇಗೆ ಸಂಚರಿಸಬೇಕು. ರೈಲಿನಲ್ಲಿ ಪ್ರಯಾಣಿಸುವ ಪ್ರತಿಯೊಬ್ಬರಿಗೂ ಸರಕ್ಷತೆ ಮತ್ತು ಭದ್ರತೆ ಒದಗಿಸಬೇಕು ಎಂದು ತಿಳಿಸಿದ್ದಾರೆ.

ಈ ಹಿಂದೆ ನಾನು ರೈಲ್ವೆ ಸಚಿವೆಯಾಗಿದ್ದ ಸಮಯದಲ್ಲಿ ಅಪಘಾತ ನಿಯಂತ್ರಣ ಸಾಧನಗಳು ಹಾಗೂ ಅದಕ್ಕೆ ಸಂಬಂಧಿಸಿದ ಸುರಕ್ಷತಾ ಕ್ರಮಗಳನ್ನು ಪರಿಚಯಿಸಿದ್ದೆ. ಏಕೆ ಅವುಗಳನ್ನು ಪಾಲಿಸುತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಏಕೆ ರೈಲು ಅಪಘಾತಗಳು ಹೆಚ್ಚುತ್ತಿವೆ, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುತ್ತಿಲ್ಲವೇ ಎಂದು ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ.

RELATED ARTICLES

Related Articles

TRENDING ARTICLES