Sunday, December 22, 2024

ಕನ್ನಡಿಗ ಕೆ.ಎಲ್ ರಾಹುಲ್ ಅರ್ಧಶತಕ

ಬೆಂಗಳೂರು : ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್-2023 ಫೈನಲ್ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ಅರ್ಧಶತಕ ಸಿಡಿಸಿದರು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ವೇಳೆ ವಿರಾಟ್ ಕೊಹ್ಲಿ ಅವರೊಂದಿಗೆ ಜೊತೆಯಾದ ಕೆ.ಎಲ್ ರಾಹುಲ್ ಸಮಯೋಚಿತ ಆಟವಾಡಿದರು.

86 ಎಸೆತಗಳಲ್ಲಿ 1 ಬೌಂಡರಿಗಳ ನೆರವಿನೊಂದಿಗೆ ರಾಹುಲ್ ಅರ್ಧಶತಕ ಸಿಡಿಸಿದ್ದಾರೆ. ಪ್ರಸ್ತುತ ವಿಶ್ವಕಪ್​ನಲ್ಲಿ 2ನೇ ಅರ್ಧಶತಕ. ಹಾಗೂ ಏಕದಿನ ಕ್ರಿಕೆಟ್​ನಲ್ಲಿ ಕೆ.ಎಲ್. ರಾಹುಲ್ ಅವರ 17ನೇ ಅರ್ಧಶತಕವಾಗಿದೆ.

ವಿರಾಟ್ ಕೊಹ್ಲಿ ಔಟ್

ಅರ್ಧಶತಕ ಗಳಿಸಿದ ಬಳಿಕ ವಿರಾಟ್ ಕೊಹ್ಲಿ ಆಸಿಸ್ ನಾಯಕ ಪ್ಯಾಟ್ ಕಮ್ಮಿನ್ಸ್ ಓವರ್​ನಲ್ಲಿ ಬೌಲ್ಡ್​ ಆದರು. 63 ಎಸೆತಗಳಲ್ಲಿ 4 ಬೌಂಡರಿ ನೆರವಿನೊಂದಿಗೆ 54 ರನ್ ಗಳಿಸಿ ಪೆವಿಲಿಯನ್​ನತ್ತ ಹೆಜ್ಜೆ ಹಾಕಿದರು.

ಪ್ರಸ್ತುತ ಭಾರತ 35 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 173 ರನ್​ ಗಳಿಸಿದೆ. ಕೆ.ಎಲ್. ರಾಹುಲ್ 50 ರನ್ ಹಾಗೂ ರವೀಂದ್ರ ಜಡೇಜಾ ರನ್​​ ಗಳಿಸಿ ಕ್ರೀಸ್​ನಲ್ಲಿದ್ದಾರೆ.

RELATED ARTICLES

Related Articles

TRENDING ARTICLES