Thursday, January 23, 2025

ಬಿಜೆಪಿ,ಜೆಡಿಎಸ್​ಗೆ ಮತ ಹಾಕಿದ್ರೆ ಗ್ಯಾರಂಟಿ ಯೋಜನೆ ರದ್ದು: ಡಿ.ಕೆ.ಶಿವಕುಮಾರ್ 

ಬೆಂಗಳೂರು: ಬಿಜೆಪಿ, ಜೆಡಿಎಸ್‌ಗೆ ಮತ ಹಾಕಿದರೇ ಗ್ಯಾರಂಟಿ ಯೋಜನೆ ರದ್ದು ಮಾಡುತ್ತಾರೆಂದು ಮನೆ ಮನೆಗೆ ಭೇಟಿ ನೀಡಿ ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಜಿ ಪ್ರಧಾನಿ ದಿ. ಇಂದಿರಾಗಾಂಧಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು ಕಾಂಗ್ರೆಸ್ ಅಧಿಕಾರದಲ್ಲಿ ಇರುವವರೆಗೆ ಗ್ಯಾರಂಟಿಗಳನ್ನು ತೆಗೆಯಲ್ಲ. ಗ್ಯಾರಂಟಿ ಯೋಜನೆಗಳನ್ನು ಬದಲಾವಣೆ ಮಾಡಲ್ಲ, ಇದು ನಿಶ್ಚಿತ  ಎಂದು ಭರವಸೆ ನೀಡಿದ್ದರು.

ಗಾಂಧಿ ಕುಟುಂಬ ದೇಶಕ್ಕೆ ನೀಡಿದ ಕೊಡುಗೆ ಹಾಗೂ ಅವರು ಮಾಡಿದ ತ್ಯಾಗವನ್ನು ಭಾರತ ಎಂದೂ ಕೂಡ ಮರೆಯುವುದಿಲ್ಲ. ದೇಶದಲ್ಲಿ ಬರಗಾಲ ತಾಂಡವವಾಡುವಾಗ ಜನಪರ ಯೋಜನೆಗಳನ್ನು ಇಂದಿರಾಗಾಂಧಿ ಅವರು ಜಾರಿಗೆ ತಂದು ಜನರನ್ನು ಸಂಕಷ್ಟದಿಂದ ಪಾರು ಮಾಡಿದರು ಎಂದರು.

ಇದನ್ನೂ ಓದಿ: ದಯಮಾಡಿ ಶಿಳ್ಳೆ ಹೊಡೆಯುವುದು ಮಾಡಬೇಡಿ : ಸಿದ್ದರಾಮಯ್ಯ ಮನವಿ

ಕಾಂಗ್ರೆಸ್‌ ಸರ್ಕಾರ ಇಂದಿರಾ ಕ್ಯಾಂಟೀನ್‌ ಹಾಗೂ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಯಾವುದೇ ಕಾರಣಕ್ಕೂ ಈ ಗ್ಯಾರಂಟಿಗಳನ್ನು ಮೊಟಕುಗೊಳಿಸುವುದಿಲ್ಲ. ಈ ಗ್ಯಾರಂಟಿಗಳು ಇಡೀ ದೇಶಕ್ಕೇ ಮಾದರಿ ಎಂದು ತಿಳಿಸಿದ್ದಾರೆ ಎಂದರು.

 

 

RELATED ARTICLES

Related Articles

TRENDING ARTICLES