Wednesday, January 22, 2025

ಭಾರತಕ್ಕೆ ಆರಂಭಿಕ ಆಘಾತ : 4 ರನ್​ಗೆ ಶುಭ್​ಮನ್ ಗಿಲ್ ಔಟ್

ಬೆಂಗಳೂರು : ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವಿಶ್ವಕಪ್-2023 ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಭಾರತಕ್ಕೆ ಆರಂಭಿಕ ಆಘಾತ ನೀಡಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಭಾರತ ಉತ್ತಮ ಆರಂಭದ ನಿರೀಕ್ಷೆಯಲ್ಲಿತ್ತು. ಆದರೆ, ಮಿಚೆಲ್ ಸ್ಟಾರ್ಕ್​ ಎಸೆದ 5ನೇ ಓವರ್​ನ 2ನೇ ಎಸೆತದಲ್ಲಿ ಆ್ಯಡಂ ಝಂಪಾಗೆ ಕ್ಯಾಚ್ ನೀಡಿದ ಶುಭ್​ಮನ್ ಗಿಲ್ ಔಟಾದರು.

ಇನ್ನೂ ಇನ್ನಿಂಗ್ಸ್​ನ ಮೊದಲ ಬಾಲ್ ಎದುರಿಸಿದ ಗಿಲ್​ ಜೀವಧಾನ ಪಡೆದರು. ಆದರೆ, ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ಎಡವಿದರು. 7 ಎಸೆತಗಳಲ್ಲಿ ಕೇವಲ 4 ರನ್ ಬಾರಿಸಿ ಶುಭ್​​ಮನ್ ಗಿಲ್ ವಿಕೆಟ್ ಒಪ್ಪಿಸಿ ಪೆವಿಲಿಯನ್​ನತ್ತ ಹೆಜ್ಜೆ ಹಾಕಿದರು.

ಪ್ರಸ್ತುತ ಭಾರತ 9.2 ಓವರ್​ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 72 ರನ್​ ಗಳಿಸಿದೆ. ನಾಯಕ ರೋಹಿತ್ ಶರ್ಮಾ 43 ಹಾಗೂ ವಿರಾಟ್ ಕೊಹ್ಲಿ 23 ರನ್​ ಗಳಿಸಿ ಆಸಿಸ್​ ಬೌಲರ್​ಗಳನ್ನು ದಂಡಿಸುತ್ತಿದ್ದಾರೆ.

RELATED ARTICLES

Related Articles

TRENDING ARTICLES