Thursday, December 26, 2024

ವಿಶ್ವಕಪ್-2023 : ಕೊಪ್ಪಳದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಪಂದ್ಯದ ಲೈವ್ ಸ್ಕ್ರೀನಿಂಗ್

ಕೊಪ್ಪಳ : ನಾಳೆ ಭಾರತ ಹಾಗೂ ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್ ಹಿನ್ನಲೆ ಕೊಪ್ಪಳ ಜಿಲ್ಲಾಡಳಿತ, ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆಯಿಂದ ಲೈವ್ ಸ್ಕ್ರೀನಿಂಗ್ ಆಯೋಜನೆ ಮಾಡಲಾಗಿದೆ.

ಕ್ರಿಕೆಟ್ ಅಭಿಮಾನಿಗಳಿಗೋಸ್ಕರ ಉಚಿತ ನೇರಪ್ರಸಾರ ಏರ್ಪಡಿಸಲಾಗಿದೆ. ಬಿಗ್ ಸೌಂಡ್ ಜೊತೆ ಲೈವ್ ಸ್ಕ್ರೀನಿಂಗ್ ಆಯೋಜಿಸಲಾಗಿದೆ. ವಿಶ್ವಕಪ್ ಫೈನಲ್ ಪಂದ್ಯವನ್ನು ದೊಡ್ಡ ಸ್ಕ್ರೀನ್​​ನಲ್ಲಿ‌ ನೋಡುವ ಅವಕಾಶ ಮಾಡಿಕೊಟ್ಟ ಕೊಪ್ಪಳ ಜಿಲ್ಲಾಡಳಿತಕ್ಕೆ ಕ್ರೀಡಾಭಿಮಾನಿಗಳ ಅಭಿನಂದನೆ ಸಲ್ಲಿಸಿದ್ದಾರೆ. ನಾಳೆ ಫೈನಲ್ ಮ್ಯಾಚ್​​ಗಾಗಿ ತಾಲೂಕ ಕ್ರೀಡಾಂಗಣದಲ್ಲಿ ಭರ್ಜರಿ ಸಿದ್ಧತೆ ನಡೆದಿದೆ. ನಾಳೆ ಮಧ್ಯಾಹ್ನ 2 ಗಂಟೆಗೆ ಪಂದ್ಯ ಆರಂಭವಾಗಲಿದೆ.

ಕಾಂಗರೂ ಪಡೆಯನ್ನ ಕಟ್ಟಿ ಹಾಕಲು ದೇವರ ಬಳಿ ಕ್ರಿಕೆಟ್ ಪ್ರೇಮಿಗಳು ವಿಶೇಷ ಪ್ರಾರ್ಥನೆಯನ್ನ ಮಾಡಿದ್ದಾರೆ. ನಾಳಿನ ಹೈವೋಲ್ಟೇಜ್ ವಿಶ್ವಕಪ್ ಪಂದ್ಯದ ಗೆಲುವಿಗಾಗಿ ಬೆಂಗಳೂರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಟೀಮ್ ಇಂಡಿಯಾ ಗೆದ್ದು ಬರಲಿ ಅಂತ ಕ್ರಿಕೆಟ್ ಭಕ್ತರು ದೇವರ ಮೊರೆ ಹೋಗಿದ್ದಾರೆ.

ಭಾರತ ಗೆಲುವಿಗೆ ವಿಶೇಷ ಪೂಜೆ

ಬೆಂಗಳೂರಿನ ರಾಜರಾಜೇಶ್ವರಿನಗರದ ಪ್ರಸಿದ್ಧ ನಿಮಿಷಾಂಬ ದೇವಾಲಯದಲ್ಲಿ ಫಿನಾಲೆಗೆ ಸ್ಪೆಷಲ್ ಪೂಜೆ ಮಾಡಿಸಿದ್ದಾರೆ. ವಿಶ್ವಕಪ್​​ನಲ್ಲಿ ಭಾರತದ ಗೆಲುವಿಗಾಗಿ ವಿಶೇಷ ಹೋಮ-ಹವನ ನಡೆಸಲಾಗಿದೆ. ಹೋಮ ಮಾಡಿ ಟೀಂ ಇಂಡಿಯಾಗೆ ಅರ್ಚಕರು ಶುಭಕೋರಿದ್ದಾರೆ. ಚಂಡಿಕಾ ಹೋಮ ಮಾಡುವ ಮೂಲಕ ಭಾರತದ ಗೆಲುವಿಗಾಗಿ ಪ್ರಾರ್ಥನೆಯನ್ನು ಸಲ್ಲಿಸಲಾಗಿದೆ.

RELATED ARTICLES

Related Articles

TRENDING ARTICLES