Thursday, December 19, 2024

ಒಕ್ಕಲಿಕ-ಲಿಂಗಾಯತ ಮತಗಳು ಕ್ರೋಢಿಕರಣ ಆಗಬಹುದು : ಸಂಸದ ಕರಡಿ ಸಂಗಣ್ಣ

ಕೊಪ್ಪಳ : ಬಿ.ವೈ. ವಿಜಯೇಂದ್ರ ಹಾಗೂ ಆರ್. ಅಶೋಕ ನಾಯಕತ್ವದಲ್ಲಿ ಬಿಜೆಪಿ ಮತ್ತೊಂದು ಬಾರಿ ಅಧಿಕಾರಕ್ಕೆ ಬರಲಿದೆ. ಒಕ್ಕಲಿಕ ಹಾಗೂ ಲಿಂಗಾಯತ ಮತಗಳು ಕ್ರೋಢಿಕರಣ ಆಗಬಹುದು ಎಂದು ಸಂಸದ ಕರಡಿ ಸಂಗಣ್ಣ ಹೇಳಿದರು.

ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿ.ವೈ. ವಿಜಯೇಂದ್ರ ನೇಮಕದ ಬಳಿಕ ಕಾಂಗ್ರೆಸ್ ನಲ್ಲಿ ಚರ್ಚೆ ಆಗುತ್ತಿದೆ. 4 ಕ್ಷೇತ್ರದಲ್ಲಿ ಕಾಂಗ್ರೆಸ್ ನವರು ಲಿಂಗಾಯತರಿಗೆ ಟಿಕೆಟ್ ಕೊಡುವ ಬಗ್ಗೆ ಚರ್ಚೆ ನಡೆದಿದೆ. ಕಳೆದ ಬಾರಿಯ ಸೀಟ್ ಗಳನ್ನು ಉಳಿಸಿಕೊಳ್ಳುವ ಕೆಲಸ ಆಗುತ್ತದೆ ಎಂದು ತಿಳಿಸಿದರು.

ಆರ್. ಅಶೋಕ ಒಬ್ಬ ಅತ್ಯಂತ ಹಿರಿಯ ನಾಯಕರು. ಸಂಘ ಪರಿವಾರದಿಂದ ಬಂದ ಒಬ್ಬ ನಾಯಕ. ಹಲವಾರು ಇಲಾಖೆಗಳನ್ನು ನಿಭಾಯಿಸಿದ್ದಾರೆ. ಆರ್. ಅಶೋಕ ಅವರು ಸರ್ಕಾರದ ಜನ ವಿರೋಧಿ ನೀತಿ, ಬರ ನಿರ್ವಣೆಯ ವೈಫಲ್ಯ ಕುರಿತು ಧ್ವನಿ ಎತ್ತಲಿದ್ದಾರೆ. ವಿಜಯೇಂದ್ರ ಸಹ ಸಮರ್ಥ ಯುವನಾಯಕರಿದ್ದಾರೆ. ಹಿರಿಯರನ್ನು ಜೊತೆಗೆ ತೆಗದುಕೊಂಡು ಹೋಗುವ ಸಾಮರ್ಥ್ಯ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಒಂದು ಕಡೆ ಮುಜುಗರ ಆಗುತ್ತದೆ

ಆರ್. ಅಶೋಕ ಹಾಗೂ ಬಿ.ವೈ. ವಿಜಯೇದ್ರ ನೇಮಕಕ್ಕೆ ಹಲವರ ವಿರೋಧ ವಿಚಾರ ಕುರಿತು ಮಾತನಾಡಿ, ಒಂದು ಕಡೆ ಮುಜುಗರ ಆಗುತ್ತದೆ ಎಂದು ಅನಿಸುತ್ತದೆ. ಆದರೆ, ಅಭಿಪ್ರಾಯ ಹೇಳಲು ಸ್ವಾತಂತ್ರ್ಯ ಇದೆ. ಯಾವುದೇ ಒಂದು ಪಕ್ಷ ಕುಟುಂಬ ಇದ್ದಂಗೆ. ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಇರುತ್ತವೆ. ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವರಿಗೆ ಹಕ್ಕಿದೆ. ಮೋದಿಯವರ ನಾಯಕತ್ವ ಈ ದೇಶಕ್ಕೆ ಅವಶ್ಯಕತೆ ಇದೆ ಎಂದು ಯತ್ನಾಳ್ ಹೇಳಿದ್ದಾರೆ. ಮುಂದಿನ‌ ದಿನಗಳಲ್ಲಿ ಎಲ್ಲರೂ ಪಕ್ಷದ ಜೊತೆಗೆ ಇರಲಿದ್ದಾರೆ ಎಂದು ಸಂಗಣ್ಣ ಕರಡಿ ಹೇಳಿದರು.

RELATED ARTICLES

Related Articles

TRENDING ARTICLES