ಬೆಂಗಳೂರು : ಆರ್. ಅಶೋಕ್ ನನ್ನ ಸ್ನೇಹಿತ. ಒಳ್ಳೆಯ ಕೆಲಸ ಮಾಡಲಿ, ಒಳ್ಳೆಯ ಸಲಹೆ ಕೊಡಲಿ. ಆದರೆ, ಬರೀ ರಾಜಕೀಯ ಮಾಡಿಕೊಂಡೆ ಸಮಯ ಕಳೆಯುತ್ತಾರೆ ಎಂದರೆ ಅವರೇ ಇಷ್ಟ. ಒಳ್ಳೆಯ ಕೆಲಸ ಮಾಡಿದ್ರೆ ನಿಜವಾಗಲೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಪಕ್ಷ ನಾಯಕ ಆರ್. ಅಶೋಕ್ ಬಗ್ಗೆ ಲಘುವಾಗಿ ಮಾತನಾಡಲ್ಲ. ಹುಡುಕಾಡಿ ಕೊನೆಗೆ ಸಿಕ್ಕಿದ್ದಾರೆ, ಅವರು ಯಾವ ರೀತಿ ಸಮರ್ಪಕವಾಗಿ ನಿಭಾಯಿಸುತ್ತಾರೆ ಕಾದು ನೋಡೋಣ ಎಂದು ತಿಳಿಸಿದರು.
ಜಾತಿ ಆಧಾರದ ಮೇಲೆ ಬಿಜೆಪಿ ರಾಜ್ಯಾಧ್ಯಕ್ಷ, ವಿಪಕ್ಷ ನಾಯಕನ ಆಯ್ಕೆ ವಿಚಾರ ಕುರಿತು ಮಾತನಾಡಿ, ಜಾತ್ಯತೀತ ಪಕ್ಷ ಅಂತಾ ಇದ್ದರೆ ಅದು ಕಾಂಗ್ರೆಸ್. ಬಹಳ ಪ್ರಮುಖ ಸಮುದಾಯ ಒಕ್ಕಲಿಗರು, ಡಿಸಿಎಂ ಇದ್ದಾರೆ. ನಾನು, ಕೃಷ್ಣ ಬೈರೇಗೌಡ ಮಂತ್ರಿ ಇದ್ದೇವೆ. ಲಿಂಗಾಯತರಲ್ಲಿ ಎಂ.ಬಿ ಪಾಟೀಲ್, ಈಶ್ವರಖಂಡ್ರೆ ಮಂತ್ರಿ ಇದ್ದಾರೆ. ಎಸ್ಸಿ, ಎಸ್ಟಿಯಲ್ಲಿ ಡಾ.ಹೆಚ್.ಸಿ ಮಹದೇವಪ್ಪ, ಡಾ. ಪರಮೇಶ್ವರ್, ಮುನಿಯಪ್ಪ ಇದ್ದಾರೆ ಎಂದು ಹೇಳಿದರು.
ಒಕ್ಕಲಿಗರಿಗೆ ಕೊಟ್ಟರೆ ಆಗುತ್ತದೆಯಾ?
ಹಿಂದೂಳಿದ ವರ್ಗದಲ್ಲಿ ಸಿದ್ದರಾಮಯ್ಯಗಿಂತ ನಾಯಕ ಬೇಕಾ? ಸಣ್ಣ ಸಮುದಾಯವನ್ನು ಗುರುತಿಸಿ ಮಂತ್ರಿ ಕೊಟ್ಟಿದ್ದಾರೆ. ಅದು ಕಾಂಗ್ರೆಸ್ ಪಕ್ಷ ಮಾತ್ರ. ನಾವು ಎಲ್ಲ ಸಮುದಾಯಕ್ಕೂ ಕಾರ್ಯಕ್ರಮ ಕೊಡುತ್ತಿದ್ದೇವೆ. ಬರೀ ಅಧಿಕಾರಕ್ಕೆ ಲಿಂಗಾಯತರಿಗೆ, ಒಕ್ಕಲಿಗರಿಗೆ ಕೊಟ್ಟರೆ ಆಗುತ್ತದೆಯಾ? ಅವರು ಅಧಿಕಾರದಲ್ಲಿ ಫೇಲ್ ಆಗಿದಕ್ಕೆ ಜನರು ನಮಗೆ ಅಧಿಕಾರ ಕೊಟ್ಟಿದ್ದಾರೆ ಎಂದು ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.