Wednesday, January 15, 2025

IND vs AUS Final: ಇಂಡೋ-ಆಸೀಸ್​ ರೋಚಕ ಫೈನಲ್‌ ಪಂದ್ಯ ವೀಕ್ಷಿಸಲಿದ್ದಾರೆ ಪ್ರಧಾನಿ ಮೋದಿ

ಅಹಮದಾಬಾದ್​: ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಾಳೆ ನಡೆಯುವ ಟೀಮ್ ಇಂಡಿಯಾ ವರ್ಸಸ್ ಆಸ್ಟ್ರೇಲಿಯಾದ ಫೈನಲ್​ ಪಂದ್ಯ ನೋಡಲು ಪ್ರಧಾನಿ ನರೇಂದ್ರ ಮೋದಿ ಹಾಜರಾಗಲಿದ್ದಾರೆ.

ಐಸಿಸಿ ವಿಶ್ವಕಪ್ 2023ರ ಫೈನಲ್ ಪಂದ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಗೃಹ ಸಚಿವ ಅಮಿತ್​ ಶಾ ಮತ್ತು ಆಸ್ಟ್ರೇಲಿಯಾದ ಉಪ ಪ್ರಧಾನಿ ರಿಚರ್ಡ್ ಮಾರ್ಲ್ಸ್ ಅನೇಕ ರಾಜಕೀಯ ಗಣ್ಯರು ಸಾಕ್ಷಿಯಾಗಲಿದ್ದಾರೆ ಎಂದು ಅಹಮದಾಬಾದ್‌ನ ಪೊಲೀಸ್ ಕಮಿಷನರ್ ಜ್ಞಾನೇಂದ್ರ ಸಿಂಗ್ ಮಲಿಕ್ ಅಧಿಕೃತ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಅಶೋಕ್ ವಿಪಕ್ಷ ನಾಯಕನಾದ್ರೆ, ಅದಕ್ಕೆ ನಾನೇನು ಮಾಡಲಿ : ಸಿಎಂ ಸಿದ್ದರಾಮಯ್ಯ

ಆತಿಥೇಯ ಭಾರತ ಮತ್ತು ಸರ್ವಾಧಿಕ 5 ಬಾರಿಯ ಚಾಂಪಿಯನ್‌ ಆಸ್ಟ್ರೇಲಿಯಾ ಇದು ಇತ್ತಂಡಗಳು ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಬರೋಬ್ಬರಿ 20 ವರ್ಷಗಳ ಬಳಿಕ ಆಗುತ್ತಿರುವ ಮುಖಾಮುಖಿಯಾಗಿದೆ. ಹೀಗಾಗಿ ಪಂದ್ಯದ ಮೇಲೆ ಹಲವು ನಿರೀಕ್ಷೆ ಮತ್ತು ಕುತೂಹಲವಿದೆ.

 

ಸ್ಟೇಡಿಯಂನ ಸುತ್ತಮುತ್ತ ಈಗಾಗಲೇ ವಿಶೇಷ ಭದ್ರತಾ ವ್ಯವಸ್ಥೆ ಇದೆ.

 

RELATED ARTICLES

Related Articles

TRENDING ARTICLES