ಬೆಂಗಳೂರು: ರಾಜ್ಯದಲ್ಲಿ ನವೆಂಬರ್ 24ರಿಂದ ನ.26ರವರೆಗೆ ಎಸ್ಕಾಂ ಆನ್ಲೈನ್ ಸೇವೆ ಸ್ಥಗಿತಗೊಳ್ಳಲಿದೆ.
ರಾಜ್ಯದ ಐದು ಎಸ್ಕಾಂಗಳ ವ್ಯಾಪ್ತಿಯಲ್ಲಿ ವೆಬ್ ಪೋಟರ್ಲ್ ಗೆ ಸಂಬಂಧಿಸಿದಂತೆ ತುರ್ತು ತಾಂತ್ರಿಕ ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವ ಹಿನ್ನೆಲೆ 2 ದಿನ ‘ಎಸ್ಕಾಂ’ ಆನ್ ಲೈನ್ ಸೇವೆ ಸ್ಥಗಿತಗೊಳಿಸಲಾಗಿದೆ. ನ.24ರಂದು ಮಧ್ಯಾಹ್ನ 12ರಿಂದ ನ.26ರ ಬೆಳಗ್ಗೆ 11.59ರವರೆಗೂ ಸೇವೆ ಬಂದ್ ಆಗಿರಲಿದೆ.
ಇದನ್ನೂ ಓದಿ: ಜ್ಞಾನ, ಅರ್ಹತೆ ಇಲ್ಲದ ‘ನಕಲಿ ಸಾಮ್ರಾಟ’ನೇ ಕೊನೆಯ ಆಯ್ಕೆ : ಅಶೋಕ್ ಆಯ್ಕೆಗೆ ಕಾಂಗ್ರೆಸ್ ವ್ಯಂಗ್ಯ
ವಿವಿಧ ಪೋರ್ಟಲ್ ಗಳಲ್ಲಿರುವ ಡಾಟಾವನ್ನು ನೂತನ ಪೋರ್ಟಲ್ ಗೆ ವರ್ಗಾವಣೆ ಮಾಡುವ ಕೆಲಸ ನಡೆಯುವ ಹಿನ್ನೆಲೆ ಆನ್ ಲೈನ್ ಸೇವೆ ಸ್ಥಗಿತಗೊಳಿಸಲಾಗಿದೆ. 2 ದಿನ ವಿದ್ಯುತ್ ಬಿಲ್ ಪಾವತಿ, ಹೊಸ ಸಂಪರ್ಕಕ್ಕೆ ಆನ್ ಲೈನ್ ಅರ್ಜಿ ಸಲ್ಲಿಕೆ ಸೇವೆ ಇರುವುದಿಲ್ಲ.ಇದರಿಂದಾಗಿ ಬೆಸ್ಕಾಂ, ಚೆಸ್ಕ್ ಮೆಸ್ಕಾಂ, ಜೆಸ್ಕಾಂ, ಹೆಸ್ಕಾಂ ವ್ಯಾಪ್ತಿಯ ಜನರಿಗೆ ಸಮಸ್ಯೆಯಾಗಲಿದೆ.