Thursday, December 26, 2024

3 ಸಾವಿರ ಹೊಸ ರೈಲು, 400ಕ್ಕೂ ಅಧಿಕ ‘ವಂದೇ ಭಾರತ್’ ರೈಲು : ಅಶ್ವಿನಿ ವೈಷ್ಣವ್

ನವದೆಹಲಿ : ಮುಂದಿನ 4 ರಿಂದ 5 ವರ್ಷದಲ್ಲಿ 3 ಸಾವಿರ ಹೊಸ ರೈಲುಗಳನ್ನು ಓಡಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಹೇಳಿದ್ದಾರೆ.

ಭಾರತದ ಜನಸಂಖ್ಯೆ ಏರಿಕೆಯ ವೇಗಕ್ಕೆ ತಕ್ಕಂತೆ ಸೇವೆ ಒದಗಿಸಲು ಭಾರತೀಯ ರೈಲ್ವೆ ಇಲಾಖೆ ಶತ ಪ್ರಯತ್ನ ನಡೆಸಿದೆ. ರೈಲ್ವೆ ಪ್ರಯಾಣಿಕರ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಂಡಿದೆ.

ರೈಲ್ವೆ ಜಾಲ ವಿಸ್ತರಣೆಗಾಗಿ 5 ವರ್ಷಗಳ ಯೋಜನೆ ಸಿದ್ಧಪಡಿಸಲಾಗಿದ್ದು, ವಾರ್ಷಿಕವಾಗಿ ಈಗಿರುವ 800 ಕೋಟಿ ಪ್ರಯಾಣಿಕರ ಸಂಖ್ಯೆಯನ್ನು 1 ಸಾವಿರ ಕೋಟಿಗೆ ಏರಿಸುವ ಗುರಿಯನ್ನು ಇಲಾಖೆ ಹೊಂದಿದೆ. ಪ್ರಸ್ತುತ ದೇಶದಲ್ಲಿ 69 ಸಾವಿರ ಹೊಸ ಕೋಚ್‌ಗಳು ಸಿದ್ಧವಾಗಿವೆ ಎಂದು ತಿಳಿಸಿದ್ದಾರೆ.

400-450 ವಂದೇ ಭಾರತ್‌ ರೈಲು

ಪ್ರತಿ ವರ್ಷ ಭಾರತೀಯ ರೈಲ್ವೇ 5,000 ಹೊಸ ಬೋಗಿಗಳನ್ನು ತಯಾರಿಸುತ್ತಿದೆ. ಇದರ ಸಹಾಯದಿಂದ, ರೈಲ್ವೆಯು ಪ್ರತಿ ವರ್ಷ ಸುಮಾರು 250 ಹೊಸ ರೈಲುಗಳನ್ನು ಪ್ರಾರಂಭಿಸಬಹುದು. ಇದರಲ್ಲಿ ವಂದೇ ಭಾರತ್‌ ರೈಲುಗಳನ್ನು ಸೇರಿಸಲಾಗಿಲ್ಲ. ಮುಂಬರುವ ವರ್ಷಗಳಲ್ಲಿ 400 ರಿಂದ 450 ವಂದೇ ಭಾರತ್‌ ರೈಲುಗಳಿಗೆ ಇಲಾಖೆ ಚಾಲನೆ ನೀಡಲಿದೆ. ಹೈಸ್ಪೀಡ್‌ ರೈಲಿನ ಕನಸನ್ನು ಈಡೇರಿಸುವಲ್ಲಿ ವಂದೇ ಭಾರತವು ಸಂಪೂರ್ಣವಾಗಿ ಯಶಸ್ವಿಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

RELATED ARTICLES

Related Articles

TRENDING ARTICLES