Thursday, December 19, 2024

ನಮಗೆ ಗೊತ್ತಿರುವ ಪ್ರಕಾರ ವಿಪಕ್ಷ ನಾಯಕನ ಆಯ್ಕೆ ಆಗಿಲ್ಲ : ಅರವಿಂದ್ ಬೆಲ್ಲದ್

ಬೆಂಗಳೂರು : ನಮಗೆ ಗೊತ್ತಿರುವ ಪ್ರಕಾರ ವಿಪಕ್ಷ ನಾಯಕನ ಆಯ್ಕೆ ಆಗಿಲ್ಲ ಎಂದು ಶಾಸಕ ಅರವಿಂದ್ ಬೆಲ್ಲದ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಮ್ಮ ಅಭಿಪ್ರಾಯ ಪಡೆಯಲು ವರಿಷ್ಠರು ಆಗಮಿಸಿದ್ದಾರೆ. ನಾವು ಕೂಡ ನಮ್ಮ ಅಭಿಪ್ರಾಯ ಹೇಳ್ತೀವಿ. ಉತ್ತರ ಕರ್ನಾಟಕಕ್ಕೆ ಪ್ರಾಶಸ್ತ್ಯ ಕೇಳಲಿದ್ದೇವೆ. ಉತ್ತರ ಕರ್ನಾಟಕ ಭಾಗದಲ್ಲಿ ಯಾರಾಗಬೇಕು ಅಂತ ವರಿಷ್ಠರು ತೀರ್ಮಾನ ಮಾಡಲಿ ಎಂದು ತಿಳಿಸಿದ್ದಾರೆ.

ಮುಂಬರುವ ಲೋಕಸಭೆ ಚುನಾವಣೆಗೆ ಎಲ್ಲಾ ತಯಾರಿ ಆಗಬೇಕಿದೆ. ಬಿಜೆಪಿ ಬಹಳ ತಯಾರಿ ನಡೆಸಬೇಕಿದೆ. ಬಿಜೆಪಿ ಹೆಚ್ಚಿನ ಸೀಟು ಬರಬೇಕಿದೆ. ಉತ್ತರ ಕರ್ನಾಟಕ ಬಿಜೆಪಿಗೆ ಬಹಳ ದೊಡ್ಡ ಶಕ್ತಿ. ಉತ್ತರ ಕರ್ನಾಟಕಕ್ಕೆ ವಿಪಕ್ಷ ನಾಯಕನ ಸ್ಥಾನ ನೀಡಬೇಕು. ಅದಕ್ಕೆ ವರಿಷ್ಠರು ಸಭೆ ಕರೆದಿದ್ದಾರೆ, ಅವರ ಬಳಿ ಹೇಳ್ತೀವಿ ಎಂದು ಅರವಿಂದ್ ಬೆಲ್ಲದ್ ಪುನರುಚ್ಚರಿಸಿದ್ದಾರೆ.

.. ಜನರು ಊಟ ಹಾಕಿದ್ದಾರೆ

ಪ್ರತಿಪಕ್ಷದ ನಾಯಕನ ಸ್ಥಾನ ಉತ್ತರ ಕರ್ನಾಟಕದವರಿಗೆ ಕೊಡಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ. ಉತ್ತರ ಕರ್ನಾಟಕಕ್ಕೆ ಆದ್ಯತೆ ಕೊಡಬೇಕು. ಉತ್ತರ ಕರ್ನಾಟಕದ ಜನರು ಊಟ ಹಾಕಿದ್ದಾರೆ. ಉತ್ತರ ಕರ್ನಾಟಕಕ್ಕೆ ವಿಪಕ್ಷ ಸ್ಥಾನ ಕೊಡದೇ ಹೋದ್ರೆ ಜನರೇ ತೀರ್ಮಾನ ಮಾಡ್ತಾರೆ. ನನಗೆ ಯಾರ ಭಯ ಇಲ್ಲ ಎಂದಿದ್ದಾರೆ.

ಮೋದಿ ಪ್ರಧಾನಿ ಆಗೋಕೆ ಕೆಲಸ ಮಾಡ್ತೀನಿ ಅಂತ ಹೇಳಿದ್ದೇನೆ. ಯಡಿಯೂರಪ್ಪ, ವಿಜಯೇಂದ್ರಗೆ ನಾನು ಪ್ರತಿಕ್ರಿಯೆ ಕೊಡೊಲ್ಲ. ಉತ್ತರ ಕರ್ನಾಟಕ, ಹಿಂದುತ್ವದ ಹಿನ್ನಲೆಯಲ್ಲಿ ನಾನು ಕೇಳ್ತೀನಿ. ಶಾಸಕಾಂಗ ಸಭೆಯಲ್ಲಿ ಇದನ್ನ ಕೇಳ್ತೀನಿ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES