ಬೆಂಗಳೂರು : ವಿಪಕ್ಷ ನಾಯಕನಾಗಿ ಪ್ರಭಾವಿ ಒಕ್ಕಲಿಗ ನಾಯಕ ಆರ್.ಅಶೋಕ್ ಆಯ್ಕೆಯಾಗಿದ್ದಾರೆ. ಈ ಮೂಲಕ ಸದನದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಚಾಟಿ ಬೀಸಲು ಅಶೋಕ್ ‘ಸದನ ಸಾಮ್ರಾಟ್’ ಆಗಿ ಹೊರಹೊಮ್ಮಿದ್ದಾರೆ.
ಇತ್ತ, ಆರ್. ಅಶೋಕ್ ಆಯ್ಕೆಗೂ ಮೊದಲೇ ಬಿಜೆಪಿ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವರಾದ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೋಟೆಲ್ನಿಂದ ಸಿಟ್ಟಿಗೆದ್ದು ಹೊರನಡೆದಿದ್ದರು. ಬಳಿಕ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಮಾಡಿದ್ದಾರೆ.
‘ನ ದೈನ್ಯಂ, ನ ಪಲಾಯನಂ’ ಎಂದು ಯತ್ನಾಳ್ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ. ಯೋಧ ಯಾವುದಕ್ಕೂ ಪಶ್ಚಾತಾಪ ಹಾಗೂ ದೂರುವುದಿಲ್ಲ. ಅವನ ಬದುಕೇ ಹಾಗೇ ಮುಗಿಯದ ಸವಾಲು. ಸವಾಲುಗಳು ಬಹುಶಃ ಒಳ್ಳೆಯದು ಅಥವಾ ಕೆಟ್ಟದ್ದಾಗಿರಲು ಸಾಧ್ಯವಿಲ್ಲ. ಸವಾಲುಗಳೆಲ್ಲವೂ ಚಿಕ್ಕ ಸವಾಲು ಎಂದು ಹೇಳಿದ್ದಾರೆ ಎಂದು ತಿಳಿಸಿದ್ದಾರೆ.
ಆರ್. ಅಶೋಕ್ ಪ್ಲಸ್
- ಒಕ್ಕಲಿಗರ ಪ್ರಭಾವಿ ನಾಯಕರಾಗಿರುವ ಆರ್.ಅಶೋಕ್
- ಸತತ 7 ಬಾರಿ ಗೆಲುವು ಸಾಧಿಸಿರುವ ಅಶೋಕ್
- ಸಂಘ ನಿಷ್ಠೆ, ಬಿ.ಎಸ್. ಯಡಿಯೂರಪ್ಪರ ಆಪ್ತರಾಗಿರುವುದು
- ಜೆಡಿಎಸ್ ಜೊತೆ ಮೈತ್ರಿ ಹೊಂದಾಣಿಕೆಗೆ ಅನುಕೂಲ
- ಗೃಹ, ಕಂದಾಯ, ಸಾರಿಗೆಯಂತಹ ಪ್ರಭಾವಿ ಖಾತೆ ನಿಭಾಯಿಸಿದ ಅನುಭವ
- ಮೈತ್ರಿಯಾಗಿರುವುದರಿಂದ ಸದನದ ಒಳಗೆ ಹೆಚ್.ಡಿ. ಕುಮಾರಸ್ವಾಮಿ ಬೆಂಬಲ
ನ ದೈನ್ಯಂ, ನ ಪಲಾಯನಂ 🙏
A warrior cannot complain or regret anything. His life is an endless challenge, and challenges cannot possibly be good or bad. Challenges are simply challenges.
— Basanagouda R Patil (Yatnal) (@BasanagoudaBJP) November 17, 2023