Wednesday, December 25, 2024

ಲುಲು ಮಾಲ್ ಕಾಮಗಾರಿ ವೇಳೆ ಕರೆಂಟ್​ ಬಿಲ್ ಕಟ್ಟಿಲ್ಲ; ಅದಕ್ಕೂ ದಂಡ ಹಾಕ್ತೀರಾ? ಹೆಚ್. ಡಿ.ಕುಮಾರಸ್ವಾಮಿ

ಬೆಂಗಳೂರು: ಲುಲು ಮಾಲ್ ಆರಂಭಕ್ಕೂ ಮುನ್ನ 6 ತಿಂಗಳು ಕರೆಂಟ್ ನೀಡಿಲ್ಲ. ಲುಲು ಮಾಲ್​ ಬಳಕೆ ಮಾಡಿದ ವಿದ್ಯುತ್​​​​​ ಬಿಲ್​ಗೆ ದಂಡ ಹಾಕುತ್ತೀರಾ? ಎಂದು ಪರೋಕ್ಷವಾಗಿ ಡಿಕೆ ಶಿವಕುಮಾರ್​​ ವಿರುದ್ಧ ಹೆಚ್​ಡಿ ಕುಮಾರಸ್ವಾಮಿ ಹರಿಹಾಯ್ದರು.

ಇನ್ನೂ ಲುಲು ಮಾಲ್​ಗೆ 24 ಎಕರೆ ಖರಾಬು ಭೂಮಿಯನ್ನ ಕಬಳಿಸಲಾಗಿದೆ. 1934ರ ಭೂಮಿಯ ದಾಖಲೆಗಳನ್ನು ಸುಟ್ಟು ಹಾಕಿ ನಾಶ ಮಾಡಿದ್ದಾರೆ. ಇವರೆಲ್ಲ ಹೇಗೆಲ್ಲಾ ದಾಖಲೆ ಬದಲಾಯಿಸಿದ್ದಾರೆಂದು ಗೊತ್ತಿದೆ ಎಂದರು. 

ಇದನ್ನೂ ಓದಿ: ಪ್ರತಿಪಕ್ಷ ಸ್ಥಾನ ಉತ್ತರ ಕರ್ನಾಟಕಕ್ಕೇ ಬೇಕು : ಯತ್ನಾಳ್ ಪಟ್ಟು

ಭೂದಾಖಲೆಗಳನ್ನು ಅಕ್ರಮವಾಗಿ ತಿದ್ದುಪಡಿ ಮಾಡಿ ಭೂಮಿ ಕಬಳಿಸಿದ್ದಾರೆ. ಈ ಎಲ್ಲಾ ದಾಖಲೆಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಮಿ ಆರೋಪ ಮಾಡಿದರು.

RELATED ARTICLES

Related Articles

TRENDING ARTICLES