Thursday, January 23, 2025

ನಟಿ ಕಾಜೋಲ್ ಡೀಪ್ ಫೇಕ್ ವಿಡಿಯೋ ವೈರಲ್

ಬೆಂಗಳೂರು : ಡೀಪ್​ಫೇಕ್ ವಿಡಿಯೋಗಳು ಸಿನಿಮಾ ಸೆಲೆಬ್ರೆಟಿಗಳನ್ನು ಕಾಡುತ್ತಿವೆ. ಬಾಲಿವುಡ್ ನಟಿಯರಾದ ರಶ್ಮಿಕಾ ಮಂದಣ್ಣ, ಕತ್ರಿನಾ ಕೈಫ್​​ ನಂತರ ಮತ್ತೋರ್ವ ನಟಿ ಇಂಥದ್ದೊಂದು ಕುತಂತ್ರಕ್ಕೆ ಸಿಲುಕಿಕೊಂಡಿದ್ದಾರೆ.

ಡ್ರೆಸ್ಸಿಂಗ್ ರೂಮ್​ನಲ್ಲಿ ಯುವತಿಯೋರ್ವಳು ಬಟ್ಟೆ ಬದಲಾಯಿಸುವ ದೃಶ್ಯಕ್ಕೆ ನಟಿ ಕಾಜೋಲ್ ಅವರ ಮುಖವನ್ನು ಕೃತಕ ಬುದ್ಧಿಮತ್ತೆಯಿಂದ ಜೋಡಿಸಲಾಗಿದೆ. ಬಾಲಿವುಡ್ ನಟಿ ಕಾಜಲ್ ತಮ್ಮ ಡೀಪ್‍ಫೇಕ್ ವಿಡಿಯೋ ಕಂಡು ಗರಂ ಆಗಿದ್ದಾರೆ. ಕೂಡಲೇ ದುರುಳರ ಹೆಡೆಮುರಿ ಕಟ್ಟುವಂತೆ ಅವರು ಪೊಲೀಸ್ ಇಲಾಖೆಗೆ ಮನವಿ ಮಾಡಿಕೊಂಡಿದ್ದಾರೆ.

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‍ಫೇಕ್ ವೀಡಿಯೋ ವಿಚಾರವಾಗಿ ದೆಹಲಿ ಪೊಲೀಸರು ಬಿಹಾರ ಮೂಲದ 19 ವರ್ಷದ ಯುವಕನನ್ನು ವಿಚಾರಣೆ ನಡೆಸಿದ್ದಾರೆ. ಶಂಕಿತ ಯುವಕ ಮೊದಲು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವನ್ನು ಅಪ್‍ಲೋಡ್ ಮಾಡಿದ್ದಾನೆ. ನಂತರ ಅದನ್ನು ಇತರ ವೇದಿಕೆಗಳಲ್ಲಿ ವ್ಯಾಪಕವಾಗಿ ಹಂಚಿಕೊಂಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಇದೀಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರು ಕಿಡಿಗೇಡಿಗಳ ಬಂಧನಕ್ಕೆ ಶೋಧ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES