Monday, December 23, 2024

Bigg Boss Kannada 10 : ಕ್ಯಾಪ್ಟನ್ಸಿಗಾಗಿ ಕಚ್ಚಾಟ : ತುಕಾಲಿಗೆ ಟಾಸ್ಕ್ ಆಡುವ ಅವಕಾಶ ಸಿಗುತ್ತಾ..?

ಬೆಂಗಳೂರು: ವೀಕೆಂಡ್ ಬಂತೆಂದರೆ ಸಾಕು ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್‌ನ ಕಾವು ಏರಲು ಸ್ಟಾರ್ಟ್​ ಆಗುತ್ತೆ. ಟಾಸ್ಕ್‌ನಲ್ಲಿ ಯಾರು ಭಾಗವಹಿಸಬೇಕು? ಯಾರು ಯಾರನ್ನು ಸಪೋರ್ಟ್‌ ಮಾಡಬೇಕು? ಲೆಕ್ಕಾಚಾರ ಹೇಗಿರಬೇಕು ಇವೆಲ್ಲ ಚರ್ಚೆಗಳಲ್ಲಿಯೇ ಸ್ಫರ್ಧಿಗಳು ತಲ್ಲೀನರಾಗುತ್ತಿದ್ದರು.

ಆದರೆ ಈ ಸಲ ಕ್ಯಾಪ್ಟನ್ಸಿ ಟಾಸ್ಕ್‌ಗೆ ಬಿಗ್‌ಬಾಸ್ ಒಂದು ಸಣ್ಣ ಟ್ವಿಸ್ಟ್ ಕೊಟ್ಟಿದ್ದಾರೆ. ಕ್ಯಾಪ್ಟನ್ಸಿ ಟಾಸ್ಕ್‌ ಅನ್ನು ಯಾವ ಐದು ಸ್ಪರ್ಧಿಗಳು ಆಡಬೇಕು ಎಂದು ನೀವೇ ನಿರ್ಧರಿಸಿಕೊಳ್ಳಿ ಎಂದು ಹೇಳಿದ್ದಾರೆ.

ನಮ್ರತಾ, ಸಿರಿ, ಕಾರ್ತಿಕ್, ಪ್ರತಾಪ್, ವರ್ತೂರು ಈ ಐವರು ಕ್ಯಾಪ್ಟನ್ಸಿ ಆಡಬೇಕು ಎಂದು ಮನೆಯ ಸದಸ್ಯರು ವೋಟಿಂಗ್ ಮೂಲಕ ಆರಿಸಿದ್ದಾರೆ. ಆದರೆ ತುಕಾಲಿ ಸಂತೋಷ್ ಅವರಿಗೆ ಈ ವೋಟಿಂಗ್‌ ಬಗ್ಗೆ ಆಕ್ಷೇಪವಿದೆ.
‘ಕರೆಕ್ಟಾಗಿ ವೋಟಿಂಗ್ ಆಗಿಲ್ಲ. ನಾವೂ ಭಾಗವಹಿಸಬೇಕು ಎಂದು ನಮಗೆ ಇರುತ್ತದೆ’ ಎಂದು ಅವರು ತಗಾದೆ ತೆಗೆದಿದ್ದಾರೆ.

ವಿನಯ್ ಅವರ ಮಾತಿಗೆ ವಿರೋಧ ವ್ಯಕ್ತಪಡಿಸಿ, ‘ನೀವು ಆಡಿರುವುದು ಒಂದೇ ಟಾಸ್ಕ್‌’ ಎಂದು ಚುಚ್ಚಿದ್ದಾರೆ. ತುಕಾಲಿ ಅವರು ಇದರಿಂದ ಸಿಟ್ಟಿಗೆದ್ದು, ‘ಒಂದೇ ಟಾಸ್ಕ್‌ನಲ್ಲಿ ನನ್ನ ನಾನು ಪ್ರೂವ್ ಮಾಡಿಕೊಂಡಿದ್ದೀನಿ’ ಎಂದು ಹೇಳಿದ್ದಾರೆ. ಮಾತಿಗೆ ಮಾತು ಬೆಳೆದು ಮಾತಿನ ಜಟಾಪಟಿಯೂ ನಡೆದಿದೆ.

ಹಾಗಾದ್ರೆ ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಡುವ ಸ್ಪರ್ಧಿಗಳ ಲೀಸ್ಟ್ ಬದಲಾಗುತ್ತದೆಯೇ? ತುಕಾಲಿ ಸಂತೋಷ್ ಅವರು ಕ್ಯಾಪ್ಟನ್ಸಿ ಟಾಸ್ಕ್‌ನ ಕಣಕ್ಕೆ ಇಳಿಯುತ್ತಾರೆಯೇ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಲು, JioCinemaದಲ್ಲಿ ನೇರಪ್ರಸಾರವಾಗುತ್ತಿರುವ ಬಿಗ್‌ಬಾಸ್ ಕನ್ನಡವನ್ನು ವೀಕ್ಷಿಸಬಹುದು. ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ರಾತ್ರಿ 9.30ಕ್ಕೆ ಪ್ರಸಾರವಾಗುತ್ತದೆ.

RELATED ARTICLES

Related Articles

TRENDING ARTICLES