Monday, December 23, 2024

YouTube Warning: ಡೀಪ್​ ಫೇಕ್​ ವೀಡಿಯೋ ಮಾಹಿತಿ ನೀಡದಿದ್ದರೇ ದಂಡ!

ನವದೆಹಲಿ: ಇತ್ತೀಚೆಗೆ ಚಿತ್ರರಂಗದ ಸೆಲೆಬ್ರಿಟಿಗಳಿಗೆ ಸಂಬಂಧಿಸಿ ಡೀಪ್ ಫೇಕ್​ ವಿಡಿಯೋಗಳು ಯೂಟ್ಯೂಬ್​ ತಾಣಗಳಲ್ಲಿ ಹರಿದಾಡುತ್ತಿರುವ ಹಿನ್ನೆಲೆ ಸಾರ್ವಜನಿಕ ವಲಯದಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಹೀಗಾಗಿ ಯೂಟೂಬರ್​ಗಳಿಗೆ, ಯೂಟ್ಯೂಬ್ ಕೆಲವು ನಿಯಮಗಳನ್ನು ಜಾರಿಗೆ ತರಲಿದ್ದು​ ದಂಡ ವಿಧಿಸುವ ಎಚ್ಚರಿಕೆ ನೀಡಿದೆ.

ಯೂಟ್ಯೂಬ್​ ನಲ್ಲಿ ಬಳಕೆ ಮಾಡಲಾದ ವೀಡಿಯೋ ಮತ್ತು ಫೋಟೋಗಳನ್ನು ಕೃತಕ ಬುದ್ದಿಮತ್ತೆ (ಡೀಪ್ ಫೇಕ್) ನಿಂದ ತಯಾರಿಸಿದ್ದರೇ ಅಂತವುಗಳಿಗೆ ಡಿಸ್​ಕ್ಲೇಮರ್​ ಹಾಕುವುದು ಕಡ್ಡಾಯ ಎಂದು ಹೇಳಿದೆ. ಇಲ್ಲದಿದ್ದರೇ ದಂಡ ಹಾಕುವುದಾಗಿ ಎಚ್ಚರಿಕೆ ಎಂದು ಹೇಳಿದೆ.

ಇದನ್ನೂ ಓದಿ: ಇಂದಿನಿಂದ ನವೆಂಬರ್ 22ರವರೆಗೂ ಮಳೆ ಸಾಧ್ಯತೆ!

ವೀಡಿಯೋಗಳ ದುರ್ಬಳಕೆಯಾಗುವ ಸಾಧ್ಯತೆ ಗಮದಲ್ಲಿಟ್ಟುಕೊಂಡು ಇಂಥದಕ್ಕೆ ಕಡಿವಾಣ ಹಾಕಲು ಸೂಚನೆ ನೀಡಿದೆ. ಒಂದು ವೇಳೆ ಎಐ ಬಳಸಿದ್ದರೂ ಅದನ್ನು ಬಹಿರಂಗಪಡಿಸದಿದ್ದರೇ ಅಂತಹ ವೀಡಿಯೋಗಳನ್ನು ಡಿಲೀಟ್​ ಮಾಡಿ ದಂಡವನ್ನು ವಿಧಿಸಲಾಗುವುದು ಎಂದು ಎಚ್ಚರಿಸಿದೆ. ಈ ನಿಯಮಗಳು 2024 ರಿಂದ ಜಾರಿಗೆ ಬರಲಿದೆ ಎಂದು ತಿಳಿಸಿದೆ.

https://support.google.com/youtube/answer/3399767?sjid=12428810763072349508-AP

 

 

RELATED ARTICLES

Related Articles

TRENDING ARTICLES