ಬೆಂಗಳೂರು: ಯತೀಂದ್ರ ಬೆಳವಣಿಗೆ ಇವತ್ತಿಂದಲ್ಲ ಸರ್ಕಾರ ಬಂದಾಗಿಲಿನಿಂದ ಸಿಎಂ ಅಧಿಕಾರವನ್ನು ಯತೀಂದ್ರ ಚಲಾಯಿಸುತ್ತಿರುವುದು ಜಗಜ್ಜಾಹೀರಾಗಿದೆ ಎಂದು ಬಿಜೆಪಿ ಶಾಸಕ ಆರ್.ಅಶೋಕ್ ಹೇಳಿದ್ದಾರೆ.
ಯತೀಂದ್ರ ಸಿದ್ದರಾಮಯ್ಯ ಅವರ ವಿಡಿಯೋ ವೈರಲ್ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈಗ ಬಂದಿರುವ ವೀಡಿಯೋ 10ನೇಯದ್ದೋ 15ನೇಯದ್ದೋ ಇರಬೇಕು. ಕಾಂಗ್ರೆಸ್ ಅಂದರೆ ಈ ರೀತಿ ದಂಧೆ ಮಾಡುವುದರಲ್ಲಿ ಎಕ್ಸ್ಪರ್ಟ್. ವೀಡಿಯೋ ಬಗ್ಗೆ ತನಿಖೆಯಾಗಬೇಕು ಎಂದರು.
ಏನು ಆದೇಶ ಮಾಡುತ್ತಾರೋ ಅದನ್ನು 100% ಫಾಲೋ ಮಾಡಲ್ಲ. ವರ್ಗಾವಣೆ ಮಾಡಬಾರದು ಅಂತಾ ಆದೇಶ ಮಾಡುತ್ತಾರೆ, ಆದರೆ ಸಾವಿರಾರು ವರ್ಗಾವಣೆ ಮಾಡಿದ್ದಾರೆ. ದಿನನಿತ್ಯ ಇದೇ ದಂಧೆ ಆಗಿಬಿಟ್ಟಿದೆ ಈ ಕೂಡಲೇ ಸಿಎಂ ರಾಜೀನಾಮೆ ಕೊಡಬೇಕು ಎಂದು ಕಿಡಿಕಾರಿದ್ದಾರೆ.