ಹುಬ್ಬಳ್ಳಿ-ಧಾರವಾಡ : ವಿಶ್ವಕಪ್ ಕ್ರಿಕೆಟ್ ಹವಾದ ನಡುವೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಬೆಟ್ಟಿಂಗ್ ಭರಾಟೆ ಜೋರಾಗಿದೆ.
ಹೌದು, ಒಂದು ಕಡೆಗೆ ಕ್ರಿಕೇಟೆ ಬೆಟ್ಟಿಂಗ್ ಮತ್ತೊಂದು ಕಡೆಗೆ ಜೂಜಾಟದ ಪ್ರಕರಣಗಳ ಕುಳಗಳಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ಕ್ರಿಕೆಟ್ ಬೆಟ್ಟಿಂಗ್ ಮತ್ತು ಜೂಜಾಟಕ್ಕೆ ಕಡಿವಾಣ ಹಾಕುವಂತೆ ಅವಳಿ ನಗರದ ಎಲ್ಲಾ ಪೊಲೀಸ್ ಠಾಣೆಗಳಿಗೆ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಖಡಕ್ ಎಚ್ಚರಿಕೆಯ ಸಂದೇಶವನ್ನು ನೀಡಿದ್ದರು. ಹೀಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಿದ ಹುಬ್ಬಳ್ಳಿ ಧಾರವಾಡ ಪೊಲೀಸರು ತಮ್ಮ ತಮ್ಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಕ್ರಿಕೇಟ್ ಬೆಟ್ಟಿಂಗ್ ಮತ್ತು ಜೂಜಾಟಕ ಪ್ರಕರಣಗಳನ್ನು ಪತ್ತೆ ಮಾಡಿ ಸಾಕಷ್ಟು ಪ್ರಮಾಣದಲ್ಲಿ ಆರೋಪಿಗಳನ್ನು ಕೂಡಾ ಬಂಧನ ಮಾಡಿ ಕೇಸ್ ಗಳನ್ನು ದಾಖಲು ಮಾಡಿಕೊಂಡದ್ದಾರೆ.
ಇದನ್ನೂ ಓದಿ: ನಂದೇ ಧ್ವನಿಯನ್ನು ಈ ಹಿಂದೆ ಮಿಮಿಕ್ರಿ ಮಾಡಿದ್ದರು : ಸಚಿವ ಎಂ.ಬಿ ಪಾಟೀಲ್
ದೀಪಾವಳಿ ಹಬ್ಬ ಹಿನ್ನೆಲೆ ಪೊಲೀಸರು ಹದ್ದಿನ ಕಣ್ಣಿಟ್ಟು ಜೂಜಾಡುತ್ತಿರುವವರಿಗೆ ಬಿಸಿ ಮುಟ್ಟಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಆಯುಕ್ತರು, ದೀಪಾವಳಿ ಹಿನ್ನೆಲೆ ಜೂಜಾಟ ಆಡುತ್ತಿದ್ದ 731 ಜನರನ್ನು ಬಂಧಿಸಲಾಗಿದೆ. ಬಂಧಿತರಿಂದ 12 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ. ಹುಬ್ಬಳ್ಳಿ-ಧಾರವಾಡ ಪೊಲೀಸರು ಹದಿನೈದು ದಿನಗಳಲ್ಲಿ ಒಟ್ಟು 117 ಗ್ಯಾಂಬ್ಲಿಂಗ್ ಕೇಸ್ ದಾಖಲಿಸಿದ್ದಾರೆ ಎಂದರು.