ಮೈಸೂರು : ಕುಡಿದ ಮತ್ತಿನಲ್ಲಿ ದುಷ್ಕರ್ಮಿಗಳು ಹಳಿ ಮೇಲೆ ಮರದ ದಿಮ್ಮಿ, ಕಬ್ಬಿಣದ ರಾಡ್ ಇಟ್ಟು ಟ್ರೈನ್ ಅಪಘಾತಕ್ಕೆ ಯತ್ನಿಸಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ನಡೆದಿದೆ.
ಕಿಡಿಗೇಡಿಗಳು ಹಳಿ ಮೇಲೆ ಮರದ ದಿಮ್ಮಿ ಹಾಗೂ ಕಬ್ಬಿಣದ ರಾಡ್ ಇಟ್ಟು ಅಪಘಾತ ಮಾಡಿಸಲು ಯತ್ನಿಸಿದ್ದು ವಿಡಿಯೋ ಪತ್ತೆಯಾಗಿದೆ. ಚಾಮರಾಜನಗರದಿಂದ ಮೈಸೂರಿಗೆ ಬರುತ್ತಿದ್ದ ಎಕ್ಸ್ ಪ್ರೆಸ್ ರೈಲು ಅಪಘಾತಕ್ಕೆ ಸಂಜು ರೂಪಿಸಲಾಗಿತ್ತು. ಸುಮಾರು 400ಕ್ಕೂ ಹೆಚ್ಚು ಜನ ಪ್ರಯಾಣಿಸುತ್ತಿದ್ದ ರೈಲು ಅಪಘಾತಕ್ಕೆ ಕಿಡಿಗೇಡಿಗಳಿಂದ ಯತ್ನ ನಡೆದಿತ್ತು. ಸದ್ಯ ಚಾಲಕನ ಸಮಯ ಪ್ರಜ್ಞೆಯಿಂದ ಭಾರಿ ದುರಂತ ತಪ್ಪಿದೆ.
ಕಿಡಿಗೇಡಿಗಳು, ಹಳಿ ಮೇಲೆ ಮರದ ದಿಮ್ಮಿ, ಕಬ್ಬಿಣದ ರಾಡ್ ಇಟ್ಟು ಅಪಘಾತಕ್ಕೆ ಯತ್ನಿಸಿದ್ದರು. ಈ ಕೃತ್ಯ ಎಸಗುವ ಮುನ್ನ ವಿಡಿಯೋ ಮಾಡಿಕೊಂಡಿದ್ದರು. ಈ ಸಂಬಂಧ ಪೊಲೀಸ್ರು ಮೂವರನ್ನು ಬಂಧಿಸಿ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತರನ್ನು ಸೋಮಯ್ ಮರಾಂಡಿ, ಭಜನು ಮುರ್ಮು ಮತ್ತು ದಸಮತ್ ಮರಾಂಡಿ ಎಂದು ಗುರುತಿಸಲಾಗಿದೆ.
ತಮಾಷೆಗಾಗಿ ಹೀಗೆ ಮಾಡಿದ್ದೇವೆ
ವಿಚಾರಣೆ ವೇಳೆ ತಮಾಷೆಗಾಗಿ ಹೀಗೆ ಮಾಡಿದ್ದೇವೆ ಎಂದು ಕಿಡಿಗೇಡಿಗಳು ತಿಳಿಸಿದ್ದಾರೆ. ಮದ್ಯ ಸೇವಿಸಿ ಹಲವು ತಾಸು ರೈಲ್ವೆ ಹಳಿ ಬಳಿಯೇ ಕಾಯುತ್ತಿದ್ದರು. ಲೋಕೋ ಪೈಲಟ್ ಸಮಯ ಪ್ರಜ್ಞೆಯಿಂದ ದೊಡ್ಡ ಅಪಘಾತ ತಪ್ಪಿದೆ. ಒಂದು ವೇಳೆ ಲೋಕೋಪೈಲಟ್ ಗಮನಿಸದೆ ಇದ್ದಿದ್ದರೆ ಅಪಾರ ಸಾವು-ನೋವು ಉಂಟಾಗುತ್ತಿತ್ತು.