Monday, December 23, 2024

ಭಾರತ ತಂಡಕ್ಕೆ ಶುಭಕೋರಿದ ಸ್ಪೀಕರ್ ಯು.ಟಿ. ಖಾದರ್

ಬೆಂಗಳೂರು : ನ್ಯೂಜಿಲೆಂಡ್ ವಿರುದ್ಧ ಗೆದ್ದು ಬೀಗಿ ವಿಶ್ವಕಪ್-2023 ಫೈನಲ್​ಗೆ ಲಗ್ಗೆ ಇಟ್ಟಿರುವ ಭಾರತ ತಂಡಕ್ಕೆ ಸ್ಪೀಕರ್ ಯು.ಟಿ. ಖಾದರ್ ಶುಭಕೋರಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಭಾರತ ಕ್ರಿಕೆಟ್ ತಂಡ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ನ್ಯೂಜಿಲೆಂಡ್ ವಿರುದ್ಧ ಗೆದ್ದು ಫೈನಲ್‌ಗೆ ಪ್ರವೇಶಿಸಿದೆ. ಇದು ದೇಶ, ರಾಜ್ಯಕ್ಕೆ ಪ್ರಶಂಸನೀಯವಾದದ್ದು ಎಂದು ಹೇಳಿದ್ದಾರೆ.

ನಮ್ಮೆಲ್ಲರ ಶುಭ ಹಾರೈಕೆ ವಿಶ್ವಕಪ್ ಗೆಲ್ಲುವುದು. ವಿಶ್ವದಲ್ಲೇ ಭಾರತ ತಂಡ ನಂಬರ್ ೧ ಸ್ಥಾನಕ್ಕೆ ಬರಬೇಕು. ಭಾರತ ತಂಡದ ಗೆಲುವು ದೇಶದ ಸರ್ವರ ಗೆಲುವು. ತವರಿನಲ್ಲೇ (ಭಾರತ) ನಡೆಯುತ್ತಿರುವ ಟೂರ್ನಿಯಲ್ಲಿ ಭಾರತ ಗೆದ್ದು ವಿಶ್ವಕಪ್​ ಎತ್ತಿಹಿಡಿಯಬೇಕೆಂಬುದು ನಮ್ಮೆಲ್ಲರ ಬಯಕೆ ಎಂದು ತಿಳಿಸಿದ್ದಾರೆ.

ನಿಮಗೆ ಇಂಥ ಚರ್ಚೆ ಹೇಗೆ ಬರುತ್ತೋ

ಇನ್ನೂ ಬೆಳಗಾವಿ ಸುವರ್ಣಸೌಧದಲ್ಲಿರುವ ಸಾರ್ವರ್ಕರ್ ಫೋಟೋ ತೆಗೆಯುವ ವಿಚಾರ ಕುರಿತು ಮಾತನಾಡಿ, ಬೆಳಗಾವಿ ಸುವರ್ಣಸೌಧದಲ್ಲಿರುವ ಫೋಟೋ ಬಗ್ಗೆ ನನ್ನ ಗಮನಕ್ಕೆ ಯಾವುದೇ ಮಾಹಿತಿ ತಿಳಿದುಬಂದಿಲ್ಲ. ನಿಮಗೆ ಇಂಥ ಚರ್ಚೆ ಹೇಗೆ ಬರುತ್ತೋ ಗೊತ್ತಿಲ್ಲ ಎಂದು ಸ್ಪೀಕರ್ ಯು.ಟಿ. ಖಾದರ್ ಹೇಳಿದ್ದಾರೆ.

RELATED ARTICLES

Related Articles

TRENDING ARTICLES