Monday, December 23, 2024

ನಾನು ಲೋಕಸಭಾ ಟಿಕೆಟ್ ಆಕಾಂಕ್ಷಿ ಅಲ್ಲ : ವಿ ಸೋಮಣ್ಣ

ಬೆಂಗಳೂರು: ನಾನು ಯಾವುದೇ ಲೋಕಸಭಾ ಟಿಕೆಟ್ ಆಕಾಂಕ್ಷಿ ಅಲ್ಲ ಎಂದು ವಿ ಸೋಮಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಒಬ್ಬ ಕೆಲಸ ಮಾಡುವವನಿಗೆ, ಪಾಪ್ಯುಲರ್ ಆದವರಿಗೆ ಮುಜುಗರ ಸಂಗತಿಗಳು ಆಗುತ್ತೆ. ನಾನು ಯಾವುದೇ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಅಲ್ಲ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ಕರ್ನಾಟಕ ಘಟಕದ ಅಧ್ಯಕ್ಷರಾಗಿ ಬಿವೈ ವಿಜಯೇಂದ್ರ (BY Vijayendra) ಅವರ ನೇಮಕ ಮಾಡಿರುವ ವಿಚಾರವಾಗಿ ಮಾಜಿ ಸಚಿವ ವಿ ಸೋಮಣ್ಣ ಕೊನೆಗೂ ಮೌನಮುರಿದಿದ್ದಾರೆ. ವಿಜಯೇಂದ್ರ ಬಗ್ಗೆ ಮಾತನಾಡಲು ಇನ್ನೂ ಕಾಲ ಬಂದಿಲ್ಲ. ವಿಜಯೇಂದ್ರ ವಿಚಾರಕ್ಕೆ ಕಾಲವೇ‌ ಉತ್ತರ ಕೊಡಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ವಿದ್ಯುತ್​​​​ ಕಳ್ಳತನ ಮುಚ್ಚಿ ಹಾಕಲು ಯತೀಂದ್ರನ ಬಗ್ಗೆ ಆರೋಪ : ಸಿಎಂ ಸಿದ್ದರಾಮಯ್ಯ

ತಮ್ಮದೇ ಪಕ್ಷದ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಪಕ್ಷಕ್ಕೆ ನನ್ನದೂ ದುಡಿಮೆ,‌ ಶ್ರಮ ಇದೆ. ನನಗೆ ಡಬಲ್ ಗೇಮ್ ಮಾಡೋದು ಗೊತ್ತಿಲ್ಲ. ಅಭಿಪ್ರಾಯವನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ. ಒಬ್ಬ ಕೆಲಸ ಮಾಡುವವನಿಗೆ, ಪಾಪ್ಯುಲರ್ ಆದವರಿಗೆ ಮುಜುಗರದ ಸಂಗತಿಗಳು ಎದುರಾಗುತ್ತವೆ ಎಂದರು

 

 

 

 

RELATED ARTICLES

Related Articles

TRENDING ARTICLES