Thursday, November 21, 2024

Hasanamba Temple Income: ಹುಂಡಿ ಹೊರತುಪಡಿಸಿ ದರ್ಶನದ ಟಿಕೆಟ್‌ & ಲಾಡು ಮಾರಾಟದಿಂದ ಬಂದ ಆದಾಯ ಎಷ್ಟು ಕೋಟಿ ಗೊತ್ತಾ?

ಹಾಸನ: ವರ್ಷಕ್ಕೊಮ್ಮೆ ಮಾತ್ರ ದರ್ಶನ ಭಾಗ್ಯ ನೀಡುವ ಶ್ರೀ ಹಾಸನಾಂಬ (Hasanamba) ದೇವಿ ನೋಡಲು ಈ ವರ್ಷ ಭಕ್ತ ಸಾಗರವೇ ಹರಿದು ಬಂದಿದೆ.

Hasanamba Temple Income: ಹುಂಡಿ ಹೊರತುಪಡಿಸಿ ದರ್ಶನದ ಟಿಕೆಟ್‌ & ಲಾಡು ಮಾರಾಟದಿಂದ ಬಂದ ಆದಾಯ ಎಷ್ಟು ಕೋಟಿ ಗೊತ್ತಾ?

ಹೌದು, ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ಉತ್ಸವ (Hasanamba Utsava) ನಿನ್ನೆ ವಿದ್ಯುಕ್ ತೆರೆ ಕಂಡಿದೆ.

ನವೆಂಬರ್ 2 ರಿಂದ ಶುರುವಾಗಿದ ಈ 14 ದಿನದ ಉತ್ಸವದಲ್ಲಿ ಸಾಹಸ್ರಾರು ಭಕ್ತಾಧಿಗಳು ದೇಶ-ವಿದೇಶಗಳಿಂದಲೂ ಆಗಮಿಸಿ ದೇವಿಯ ದರ್ಶನ ಪಡೆದರು. ಇನ್ನು ಕೇವಲ 12 ದಿನಗಳಲ್ಲಿಯೇ 13 ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸಿ,  5.80 ಕೋಟಿ ರೂ ಆದಾಯ ಹರಿದು ಬಂದಿತ್ತು. ಇಂದು ಬೀಗಿ ಪೊಲೀಸ್​ ಬಂದೋಬಸ್ತ್​ನಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದು ಮುಕ್ತಾಯವಾಗಿದೆ.

ಹಾಸನಾಂಬೆ ದೇವಿ ಜಾತ್ರಾ ಮಹೋತ್ಸವದ ಇತಿಹಾಸದಲ್ಲೇ ಈ ಬಾರಿ ಗರಿಷ್ಠ ಆದಾಯದ ಮೂಲಕ ದಾಖಲೆ ನಿರ್ಮಾಣವಾಗಿದೆ. ಒಟ್ಟು 8 ಕೋಟಿ 72 ಲಕ್ಷದ 41 ಸಾವಿರದ 531 ರೂ. ದಾಖಲೆಯ ಹಣ ಸಂಗ್ರಹವಾಗಿದೆ. ಅದರಲ್ಲಿ ಕಾಣಿಕೆ ರೂಪದಲ್ಲಿ 62 ಗ್ರಾಂ ಚಿನ್ನ, 161 ಗ್ರಾಂ‌ ಬೆಳ್ಳಿ ಸಂಗ್ರಹವಾದರೆ, ವಿಶೇಷ ದರ್ಶನದ ಸಾವಿರ, ಮುನ್ನೂರು ರೂ. ಟಿಕೆ‌ಟ್, ಲಾಡು ಮಾರಾಟದಿಂದಲೇ ಬರೊಬ್ಬರಿ 6 ಕೋಟಿ 17 ಲಕ್ಷದ 34 ರೂ ಸಂಗ್ರಹ, ಇನ್ನು ಹುಂಡಿಯಲ್ಲಿ 2 ಕೋಟಿ 50 ಲಕ್ಷದ 77 ಸಾವಿರದ 497 ರೂಪಾಯಿ ಸಂಗ್ರಹದ ಮೂಲಕ ಒಟ್ಟು 8,72,41,531 ಕೋಟಿ ರೂ. ದಾಖಲೆ ಆದಾಯ ಗಳಿಕೆಯಾಗಿದೆ.

RELATED ARTICLES

Related Articles

TRENDING ARTICLES