Sunday, December 22, 2024

ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ, ದುರಾಚಾರ, ವ್ಯಭಿಚಾರ : ಜೆ.ಪಿ. ನಡ್ಡಾ ಕಿಡಿ

ರಾಜಸ್ಥಾನ : ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ, ದುರಾಚಾರ, ವ್ಯಭಿಚಾರ, ನಿಮ್ಮ ಹಕ್ಕುಗಳ ದರೋಡೆ, ವಂಶ ರಾಜಕಾರಣ ಎಂದು ಕಾಂಗ್ರೆಸ್​ ವಿರುದ್ಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಕಿಡಿಕಾರಿದ್ದಾರೆ. 

ರಾಜಸ್ಥಾನದ ದೌಸದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಎಂದರೆ ಅಭಿವೃದ್ಧಿ, ಪ್ರಗತಿ, ಜನರ ಹಿತದೃಷ್ಟಿಯಿಂದ ಕೆಲಸ ಮಾಡುವ ಸರ್ಕಾರ. ಮಹಿಳೆಯರು, ರೈತರು ಮತ್ತು ಯುವಕರಿಗೆ ಹಕ್ಕುಗಳನ್ನು ಒದಗಿಸಿ ಮತ್ತು ರಾಜಸ್ಥಾನವನ್ನು ಅಭಿವೃದ್ಧಿ ಹೊಂದಿದ ರಾಜ್ಯವಾಗಿ ಮುನ್ನಡೆಸುತ್ತದೆ ಎಂದು ಹೇಳಿದ್ದಾರೆ.

ಅವರ ಆಡಳಿತದಲ್ಲಿ ಕಾಂಗ್ರೆಸ್‌ನ ವಿಳಾಸ ನಾಪತ್ತೆಯಾಗಿದೆ. ವಿದ್ಯುತ್ ಇಲ್ಲ, ರಸ್ತೆ ಕಾಣೆಯಾಗಿದೆ. ನೀರು ಇಲ್ಲ, ಅಭಿವೃದ್ಧಿ ನಾಪತ್ತೆಯಾಗಿದೆ. ಅವರಿಗೆ ಗೊತ್ತಿರುವುದು ಒಂದೇ ಒಂದು ವಿಷಯ, ಅದು ಭ್ರಷ್ಟಾಚಾರ ಎಂದು ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಬಡತನದ ಕಡೆಗೆ ತಳ್ಳುತ್ತದೆ

ಕಾಂಗ್ರೆಸ್ ನಿಮ್ಮನ್ನು ಬಡತನದ ಕಡೆಗೆ ತಳ್ಳುತ್ತದೆ. ಅದೇ ಸಮಯದಲ್ಲಿ, ಪ್ರಧಾನಿ ಮೋದಿ ಅವರು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಮೂಲಕ ದೇಶದ 80 ಕೋಟಿ ಜನರಿಗೆ ಉಚಿತ ಪಡಿತರವನ್ನು ಒದಗಿಸುತ್ತಾರೆ. 13.5 ಕೋಟಿ ಜನರನ್ನು ಬಡತನ ರೇಖೆಯಿಂದ ಹೊರತೆಗೆದು ಅವರನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದಾರೆ ಎಂದು ಹೇಳಿದ್ದಾರೆ.

ಭಕ್ಷಕರು ಯಾರು? ಯಾರು ರಕ್ಷಕರು?

ಯಾರು ರಕ್ಷಕರು? ಮತ್ತು ಭಕ್ಷಕರು ಯಾರು? ಎಂಬುದನ್ನು ನೀವು ನಿರ್ಧರಿಸಬೇಕು. ಯಾರು ನಿಮ್ಮನ್ನು ರಕ್ಷಿಸುತ್ತಾರೆ? ಹಾಗೂ ನಿಮ್ಮ ಹಕ್ಕುಗಳನ್ನು ಕಸಿದುಕೊಳ್ಳುವವರು ಯಾರು? ಯಾರನ್ನೂ ಶಾಸಕರನ್ನಾಗಿಸುವುದು ನಮ್ಮ ಗುರಿಯಲ್ಲ. ಅದಕ್ಕಿಂತ ಹೆಚ್ಚಾಗಿ ಅವರ ಮೂಲಕ ದೌಸ (ರಾಜಸ್ಥಾನ) ಅಭಿವೃದ್ಧಿಯಾಗಬೇಕು ಮತ್ತು ಇಲ್ಲಿನ ಶಾಸಕರು ನಿಮ್ಮ ಧ್ವನಿಯಾಗಬೇಕು ಎಂಬುದು ನಮ್ಮ ಗುರಿ ಎಂದು ಜೆ.ಪಿ. ನಡ್ಡಾ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES