Wednesday, January 22, 2025

ರೋಚಕ ಜಯ.. ಫೈನಲ್‌ಗೆ ಲಗ್ಗೆ ಇಟ್ಟ ಆಸ್ಟ್ರೇಲಿಯಾ

ಬೆಂಗಳೂರು : ಏಕದಿನ ವಿಶ್ವಕಪ್-2023 ಫೈನಲ್​ಗೆ ಎರಡನೇ ತಂಡವಾಗಿ ಆಸ್ಟ್ರೇಲಿಯಾ ಎಂಟ್ರಿ ಕೊಟ್ಟಿದೆ. ಈ ಸೋಲಿನೊಂದಿಗೆ ದಕ್ಷಿಣ ಆಫ್ರಿಕಾ ಚೋಕರ್ಸ್​ ಪಟ್ಟವನ್ನು ತನ್ನಲ್ಲೇ ಉಳಿಸಿಕೊಂಡಿದೆ.

ದಕ್ಷಿಣ ಆಫ್ರಿಕಾ ತಂಡವನ್ನು 3 ವಿಕೆಟ್​ಗಳಿಂದ ಮಣಿಸಿದ ಆಸ್ಟ್ರೇಲಿಯಾ ಈ 8ನೇ ಬಾರಿ ವಿಶ್ವಕಪ್​ ಫೈನಲ್​ಗೆ ಎಂಟ್ರಿ ಕೊಟ್ಟ ದಾಖಲೆ ಬರೆಯಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣಾ ಆಫ್ರಿಕಾ ತಂಡ 49.4 ಓವರ್​ಗಳಲ್ಲಿ 212 ರನ್​ಗಳಿಗೆ ಆಲೌಟ್​ ಆಯಿತು. ಈ ಸುಲಭ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 47.2 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು.

ಆಸ್ಟ್ರೇಲಿಯಾ ಪರ ಹೆಡ್ ಆಕರ್ಷಕ ಅರ್ಧಶತಕ (62) ಸಿಡಿಸಿದರು. ಡೇವಿಡ್ ವಾರ್ನರ್ 29, ಸ್ಟೀವನ್ ಸ್ಮಿತ್ 30, ಇಂಗ್ಲಿಸ್ 28 ರನ್​ ಗಳಿಸಿದರು. ದಕ್ಷಿಣ ಆಫ್ರಿಕಾ ಪರ ಜೆರಾಲ್ಡ್ ಕೊಯೆಟ್ಝಿ ಹಾಗೂ ತಬ್ರೇಝ್ ಶಂಸಿ ತಲಾ ಎರಡು ವಿಕೆಟ್, ರಬಾಡ, ಕೇಶವ್ ಮಹರಾಜ ಹಾಗೂ ಮಾಕ್ರಂ ತಲಾ ಒಮದು ವಿಕೆಟ್ ವಿಕೆಟ್ ಪಡೆದರು.

RELATED ARTICLES

Related Articles

TRENDING ARTICLES