Wednesday, January 15, 2025

ವಿಜಯೇಂದ್ರ ಒಳ್ಳೇ ಸಂಘಟನೆಗಾರ ಅಲ್ಲ : ಸಚಿವ ಡಾ.ಜಿ.ಪರಮೇಶ್ವರ್​

ಬೆಂಗಳೂರು: ವಿಜಯೇಂದ್ರ ಒಳ್ಳೇ ಸಂಘಟನೆಗಾರ ಎಂದು ಹೇಳಲು ಬರುವುದಿಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ. 

ನಗರದಲ್ಲಿ ಮಾತನಾಡಿದ ಅವರು ಇದು ಬಿ. ವೈ ವಿಜಯೇಂದ್ರ ನೂತನ ಬಿಜೆಪಿ ಸಾರಥಿಯಾಗಿರುವ ವಿಚಾರವಾಗಿ ಪ್ರತಿಕ್ರಿಯೆಸಿದ್ದಾರೆ. ನಅಧಿಕಾರ ಸ್ವೀಕಾರ ವಿಚಾರ  ಸಂಬಂಧ ಇದು ಅವರ ಪಕ್ಷದ ಆಂತರಿಕ ವಿಚಾರ ಆದರೆ ರಾಜ್ಯದ ದೃಷ್ಟಿಯಿಂದ ವಿರೋಧ ಪಕ್ಷ ಬಲಿಷ್ಠವಾಗಿರಬೇಕು. ಸರ್ಕಾರವನ್ನು ಪಾಸಿಟಿವ್ ಆಗಿ  ಎಚ್ಚರಿಸಬೇಕೆಂಬುದು ನಮ್ಮ ಅಪೇಕ್ಷೆ ಎಂದರು. 

 ನಾವು ಯಾವುದೇ ಸರ್ಕಾರ ಇದ್ದರೂ ಅದನ್ನು ನಿರೀಕ್ಷೆ ಮಾಡುತ್ತೇವೆ. ವಿಜಯೇಂದ್ರ ಒಳ್ಳೇ ಸಂಘಟನೆಗಾರ ಎಂದು ಹೇಳಲು ಬರುವುದಿಲ್ಲ ಎಂದು ಕಿಡಿಕಾರಿದ್ದಾರೆ. 

RELATED ARTICLES

Related Articles

TRENDING ARTICLES