Monday, December 23, 2024

ನಾಯಿ ಕಚ್ಚಿದ ಪ್ರಕರಣ : ಇಂದು ವಿಚಾರಣೆಗೆ ಹಾಜರಾಗಲಿದ್ದಾರೆ ನಟ ದರ್ಶನ್

ಬೆಂಗಳೂರು: ನಾಯಿ ಕಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನಟ ದರ್ಶನ್ ಆರ್.ಆರ್.ನಗರ ಪೊಲೀಸ್‍ ಠಾಣೆಯಲ್ಲಿ ವಿಚಾರಣೆಗಾಗಿ ಹಾಜರಾಗಲಿದ್ದಾರೆ.

ಇಂದು ಬೆಳಗ್ಗೆ 11.30 ಕ್ಕೆ ಸ್ಟೇಷನ್ ಗೆ ಹಾಜರಾಗಿ ಹೇಳಿಕೆ ದಾಖಲಿಸಲಿದ್ದಾರೆ ದರ್ಶನ್ ಮೂರು ದಿನದ ಒಳಗೆ ಸಿಸಿಟಿವಿ ಫೂಟೇಜ್ ಜೊತೆ ವಿಚಾರಣೆಗೆ ಬರಬೇಕೆಂದು ಪೊಲೀಸ್ ರು ನೋಟೀಸ್ ಕೊಟ್ಟಿದ್ದರು.

ಏನಿದು ಪ್ರಕರಣ?

ಈ ಹಿಂದೆ ದರ್ಶನ್ ವಿರುದ್ಧ ಆರ್‌ಆರ್ ನಗರದ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ದರ್ಶನ್ ಮನೆಯ ನಾಯಿಗಳು ಮಹಿಳೆಯೊಬ್ಬರ ಮೇಲೆ ಎರಗಿ ಕಚ್ಚಿದ ಸಂಬಂಧ ಐಪಿಸಿ 289ರ ಅಡಿ ನಾಯಿ ನೋಡಿಕೊಳ್ಳುತ್ತಿದ್ದವನ ಮೇಲೆ ಮತ್ತು ನಟ ದರ್ಶನ್ ವಿರುದ್ಧ ಕೇಸ್ ದಾಖಲಾಗಿತ್ತು.

 

 

 

RELATED ARTICLES

Related Articles

TRENDING ARTICLES