Thursday, December 19, 2024

ಅಕ್ರಮ ವಿದ್ಯುತ್ ಬಳಕೆ: ಹೆಚ್​ ಡಿ ಕೆ ಮನೆಗೆ ಬೆಸ್ಕಾಂ ಸಿಬ್ಬಂದಿ ಭೇಟಿ!

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಮನೆಗೆ ಅಕ್ರಮ ವಿದ್ಯುತ್​ ಸಂಪರ್ಕ ಪಡೆದ ಹಿನ್ನೆಲೆ ಬೆಸ್ಕಾಂ ಜಾಗೃತದಳದ ತಂಡ ಭೇಟಿ ನೀಡಿ ಪರಿಶೀಲಿಸಿದೆ.

ದೀಪಾವಳಿ ಹಬ್ಬದ ಹಿನ್ನೆಲೆ ಬೆಂಗಳೂರಿನಲ್ಲಿರುವ ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಮನೆಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಆದರೇ, ಈ ವಿದ್ಯುತ್ ನ್ನು ಬೆಸ್ಕಾಂ ನ ವಿದ್ಯುತ್ ಕಂಬದಿಂದ ನೇರವಾಗಿ ಹಾಕಿ ಅಕ್ರಮವಾಗಿ ವಿದ್ಯುತ್ ಬಳಕೆ ಮಾಡಲಾಗಿತ್ತು.

ಇದನ್ನೂ ಓದಿ: ಹೆಚ್​ಡಿಕೆ ಮನೆ ದೀಪಾಲಂಕಾರಕ್ಕೆ ಅಕ್ರಮ ವಿದ್ಯುತ್‌ ಸಂಪರ್ಕ: ಹೆಚ್​ಡಿಕೆ ಟ್ವೀಟ್​!

ಈ ಕುರಿತು ಸಾರ್ವಜನಿಕ ವಲಯದಲ್ಲಿ ಮತ್ತು ಕಾಂಗ್ರೆಸ್ ಪಕ್ಷ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು, ಈ ಹಿನ್ನೆಲೆ ಹೆಚ್‌ಡಿಕೆ ನಿವಾಸಕ್ಕೆ ಬೆಸ್ಕಾಂ ಜಾಗೃತದಳದ ಐದು ಮಂದಿ ಸಿಬ್ಬಂದಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ವಿದ್ಯುತ್​ ದೀಪಾಲಂಕಾರವನ್ನು ಆನ್ ಮಾಡಿಸಿ ವಿದ್ಯುತ್ ಬಳಕೆಯ ಲೆಕ್ಕಾಚಾರ ಹಾಕಿ 10 ನಿಮಿಷಕ್ಕೆ ಎಷ್ಟು ವಿದ್ಯುತ್ ಬಳಕೆ ಮಾಡಲಾಗಿದೆ ಎಂದು ರೀಡಿಂಗ್ ಪರಿಶೀಲಿಸಿದ್ದಾರೆ.

RELATED ARTICLES

Related Articles

TRENDING ARTICLES