Monday, December 23, 2024

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ ವಿಜಯೇಂದ್ರ ಆಯ್ಕೆ: ಮಾಜಿ ಸಚಿವ ಸುಧಾಕರ್ ಪ್ರತಿಕ್ರಿಯೆ!

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ನೇಮಕವಾದ ಹಿನ್ನೆಲೆ ಮಾಜಿ ಸಚಿವ ಡಾ. ಕೆ. ಸುಧಾಕರ್ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪಕ್ಷದ ಆಯ್ಕೆ, ಹಾಗಾಗಿ ಸ್ವಾಗತ ಮಾಡುತ್ತೇನೆ. ಒಳ್ಳೆಯದಾಗಲಿ, ಅವರಿಗೆ ಪಕ್ಷ ದೀಪಾವಳಿ ಉಡುಗೊರೆ ಕೊಟ್ಟಿದೆ. ಅದನ್ನು ಸದ್ಭಳಕೆ ಮಾಡಿಕೊಂಡು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅವರ ತಂದೆಯ ಹಾದಿಯಲ್ಲೇ ಮುನ್ನಡೆಯಲಿ ಎಂದು ಹಾರೈಸುತ್ತೇನೆ.

ಇದನ್ನೂ ಓದಿ: ದೀಪಾವಳಿ ದಿನದಂದೆ ಬೀದಿ ನಾಯಿಯ ದಾಳಿ: 20 ಮಂದಿ ಆಸ್ಪತ್ರೆ ಪಾಲು!

ಇನ್ನು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಆಕಾಂಕ್ಷಿಯೇ ಅಲ್ಲ, ನಾನು ಯಾವುದಕ್ಕೂ ಆಕಾಂಕ್ಷಿಯೇ ಅಲ್ಲ. ಟಿಕೆಟ್ ಕೊಟ್ಟರೆ ಅದೆಲ್ಲಾ ಮುಂದೆ ನೋಡೋಣ. ಈಗ ಹೈದರಾಬಾದ್​​ನಲ್ಲಿ ಸ್ವಲ್ಪ ಕೆಲಸ ಕೊಟ್ಟಿದ್ದಾರೆ. ಕೊಟ್ಟಿರುವ ಕೆಲಸವನ್ನು ಹೋಗಿ ಪ್ರಾಮಾಣಿಕವಾಗಿ ಮಾಡುತ್ತೇನೆ. ಚುನಾವಣಾ ಫಲಿತಾಂಶ ಬಂದು ಆರು ತಿಂಗಳು ಆಗಿದೆ. ಯಾರೆಲ್ಲಾ ಕೊನೆಯ ಪಕ್ಷ ನನ್ನ ಜೊತೆ ಫೋನ್ ನಲ್ಲಿ ಮಾತಾಡಿದ್ದಾರೆ ಅಂತಾ ನನಗೆ ಗೊತ್ತಿದೆ ಎಂದರು.

RELATED ARTICLES

Related Articles

TRENDING ARTICLES