Wednesday, January 1, 2025

ಆದಿವಾಸಿಗಳ ಕಲ್ಯಾಣಕ್ಕೆ 24,000 ಕೋಟಿ ಯೋಜನೆಗೆ ಮೋದಿ ನಾಳೆ ಚಾಲನೆ!

ದೆಹಲಿ: ಆದಿವಾಸಿಗಳ ಉನ್ನತಿಗಾಗಿ 24,000 ಕೋಟಿ ರೂ.ಗಳ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ನಾಳೆ ಚಾಲನೆ ನೀಡಲಿದ್ದಾರೆ.

ಸ್ವಾತಂತ್ರ್ಯಾ ನಂತರ ದೇಶದಲ್ಲಿ ಈ ರೀತಿಯ ಮೊದಲ ಯೋಜನೆ ಇದಾಗಿದೆ. ಇದನ್ನು PM PVTG (ನಿರ್ದಿಷ್ಟ ದುರ್ಬಲ ಬುಡಕಟ್ಟು ಗುಂಪು) ಅಭಿವೃದ್ಧಿ ಮಿಷನ್ ಎಂದು ಹೆಸರಿಸಲಾಗಿದೆ. 2023-24ರ ಹಣಕಾಸು ವರ್ಷದ ಬಜೆಟ್‌ನಲ್ಲಿ ಈ ಉದ್ದೇಶವನ್ನು ಘೋಷಿಸಲಾಗಿದೆ. ಈ ಬುಡಕಟ್ಟು ಜನಾಂಗದವರು ಕಾಡುಗಳಲ್ಲಿ ವಾಸಿಸುತ್ತಾರೆ. ಅವರನ್ನು ತಲುಪುವುದು ಸುಲಭವಲ್ಲ. ಹೀಗಾಗಿ ಅವರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆ ರೂಪಿಸಲಾಗಿದೆ.

ಇದನ್ನೂ ಓದಿ: ಮಹಿಳೆಯರಿಗೆ ಸಿಹಿಸುದ್ದಿ: ಶಕ್ತಿ ಯೋಜನೆಯ ಪ್ರಯಾಣ ಮತ್ತಷ್ಟು ಸುಲಭ!

ಸರ್ಕಾರದ ಮೂಲಗಳ ಪ್ರಕಾರ, ಮಿಷನ್ ಅಡಿಯಲ್ಲಿ ರಸ್ತೆ ಮತ್ತು ಟೆಲಿಕಾಂ ಸಂಪರ್ಕ, ವಿದ್ಯುತ್, ವಸತಿ, ಶುದ್ಧ ಕುಡಿಯುವ ನೀರು ಮತ್ತು ನೈರ್ಮಲ್ಯ, ಶಿಕ್ಷಣ, ಆರೋಗ್ಯ ಮತ್ತು ಪೌಷ್ಟಿಕಾಂಶ ಸೌಲಭ್ಯಗಳನ್ನು ಈ ಬುಡಕಟ್ಟು ಪ್ರದೇಶಗಳಲ್ಲಿ ಒದಗಿಸಲಾಗುವುದು. ಅಲ್ಲದೆ, ಅವರಿಗೆ ಜೀವನೋಪಾಯದ ಅವಕಾಶಗಳನ್ನು ಒದಗಿಸಲಾಗುವುದು.

ಒಂಬತ್ತು ಸಚಿವಾಲಯಗಳ 11 ಯೋಜನೆಗಳ ಮೂಲಕ ಈ ಮಿಷನ್ ಅನ್ನು ಕಾರ್ಯಗತಗೊಳಿಸಲಾಗುತ್ತದೆ. ಯೋಜನೆಯ ಕೆಲವು ಷರತ್ತುಗಳನ್ನು ಸಹ ಸಡಿಲಗೊಳಿಸಲಾಗುವುದು.

RELATED ARTICLES

Related Articles

TRENDING ARTICLES