Sunday, December 22, 2024

ಹಾಸನಾಂಬೆ ಸಾರ್ವಜನಿಕ ದರ್ಶನ ನಾಳೆ ಅಂತ್ಯ

ಹಾಸನ: ವರ್ಷಕ್ಕೊಮ್ಮೆ ಮಾತ್ರ ದರ್ಶನ ಭಾಗ್ಯ ನೀಡುವ, ಬೇಡಿದ ವರವನ್ನು ಕರುಣಿಸುತ್ತಾ ಹಾಸನದಲ್ಲಿ ನೆಲೆನಿಂತಿರುವ ಹಾಸನಾಂಬೆ ದೇವಾಲಯದ ದರ್ಶನ ನಾಳೆ ಅಂತ್ಯವಾಗಲಿದೆ.

ಇಂದೂ ಕೂಡಾ ಸಾವಿರಾರು ಭಕ್ತರು ತಾಯಿಯ ದರ್ಶನ ಪಡೆಯುತ್ತಿದ್ದಾರೆ. ಅಂದ್ರೆ ಇಂದು ಭಕ್ತರ ಸಂಖ್ಯೆ ಕೊಂಚ ಇಳಿಕೆಯಾಗಿದೆ. ನವೆಂವರ್ 2 ರಿಂದ ಶುರುವಾಗಿದ್ದ 12 ದಿನ ಸಾರ್ವಜನಿಕರಿಗೆ ಹಾಸನಾಂಬೆಯ ದರ್ಶನೋತ್ಸವ ನಾಳೆ ಅಂತ್ಯವಾಗಲಿದೆ.

ಇದನ್ನೂ ಓದಿ: ವಿಜಯೇಂದ್ರಗೆ ಗೆಲುವಿನ ಸೂತ್ರ ಹೇಳಿದ ಮಾಜಿ ಸಿಎಂ ಎಸ್.ಎಂ ಕೃಷ್ಣ

ಸಾರ್ವಜನಿಕರ ದರ್ಶನಕ್ಕೆ ನಾಳೆಯೇ ಕೊನೆ ದಿನವಾಗಿದೆ ನಾಳೆ ಮಧ್ಯಾಹ್ನದ ವೇಳೆಗೆ ಗರ್ಭಗುಡಿಯ ಬಾಗಿಲು ಬಂದ್​ ಆಗಲಿದೆ. ಪುರೋಹಿತರು ಶಾಸ್ತ್ರೋಕ್ತವಾಗಿ ಗರ್ಭಗುಡಿಯ ಬಾಗಿಲು ಮುಚ್ಚಲಿದ್ದಾರೆ.. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಬಾಗಿಲು ಬಂದ್​ ಆಗಲಿದೆ.

RELATED ARTICLES

Related Articles

TRENDING ARTICLES