Monday, December 23, 2024

ಮಹಾ ಎಡವಟ್ಟು : ಟೈಗರ್-3 ಚಿತ್ರ ಪ್ರದರ್ಶನದ ವೇಳೆ ಥಿಯೇಟರ್ ಒಳಗೆ ಪಟಾಕಿ ಸಿಡಿಸಿದ ಫ್ಯಾನ್ಸ್

ಬೆಂಗಳೂರು: ದೀಪಾವಳಿ ಸಂಭ್ರಮ ಎಲ್ಲಾ ಕಡೆಯಲ್ಲೂ ಜೋರಾಗುತ್ತಿದ್ದಂತೆಯೇ ಪಟಾಕಿಗಳ ಸೌಂಡ್ ಕೂಡ ಹೆಚ್ಚುತ್ತಲೇ ಇದೆ.

ಹೌದು, ಸಲ್ಮಾನ್ ಖಾನ್ ನಟನೆಯ ಟೈಗರ್ 3 ಸಿನಿಮಾ ವೇಳೆ ಥಿಯೇಟರ್ ಒಳಗೆ ಪಟಾಕಿ ಸಿಟಿಸಿ ಘಟನೆ ನಡೆದಿದೆ. ಈ ಸಿನಿಮಾದಲ್ಲಿ ಶಾರುಖ್ ಖಾನ್ ಅತಿಥಿ ಪಾತ್ರವೊಂದನ್ನು ಮಾಡಿದ್ದಾರೆ. ಅವರ ಎಂಟ್ರಿಗೆ ಅಭಿಮಾನಿಗಳು ಭಾರೀ ಪ್ರಮಾಣದಲ್ಲಿ ಪಟಾಕಿ ಸಿಡಿಸಿದ್ದಾರೆ.

ಮೊನ್ನೆ ರಿಲೀಸ್ ಆದ ಸಲ್ಮಾನ್ ಖಾನ್ ನಟನೆಯ ಟೈಗರ್-3 ಚಿತ್ರ ಪ್ರದರ್ಶನದ ವೇಳೆ ಮಹಾರಾಷ್ಟ್ರದ ಮಾಲೆಂಗಾವ್​ನಲ್ಲಿ ಚಿತ್ರಮಂದಿರದಲ್ಲಿ ಈ ಘಟನೆ ಸಂಭವಿಸಿದೆ. ಪಟಾಕಿಗಳ ಆರ್ಭಟದಿಂದ ಜನರು ದಿಕ್ಕಪಾಲಾಗಿದ್ದಾರೆ ಹಾಗಾಗಿ ಥಿಯೇಟರ್ ತುಂಬಾ ಪಟಾಕಿಯ ಕಿಡಿಗಳು ಹಾರಾಡಿವೆ.

ಇದನ್ನೂ  ಓದಿ: ಅಗ್ನಿ ದುರಂತ: 6 ಕಾರ್ಮಿಕರು ಸಜೀವದಹನ!

ನಿನ್ನೆ ದೀಪಾವಳಿ ಆಗಿದ್ದರಿಂದ ಸಾಕಷ್ಟು ಅಭಿಮಾನಿಗಳು ಥಿಯೇಟರ್ ಗೆ ಆಗಮಿಸಿ ನೆಚ್ಚಿನ ನಟನ ಚಿತ್ರವನ್ನು ಖುಷಿಯಿಂದ ನೊಡುತ್ತಿದ್ದರು. ಈ ಸಮಯದಲ್ಲಿ ಕೆಲ ಕಿಡಿಗೇಡಿ ಅಭಿಮಾನಿಗಳು ಶಾರುಖ್ ಖಾನ್ ಎಂಟ್ರಿಗೆ ಭಾರೀ ಪ್ರಮಾಣದಲ್ಲಿ ಪಟಾಕಿ ಸಿಡಿಸಿದ್ದಾರೆ.

ಫ್ಯಾನ್ಸ್​ ಹುಚ್ಚಾಟಕ್ಕೆ ಪ್ರೇಕ್ಷಕರ ಪರದಾಟ ವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. ಪಟಾಕಿಗಳ ಕಿಡಿಯಿಂದ ತಪ್ಪಿಸಿಕೊಳ್ಳಲು ಜನರು ಚಿತ್ರಮಂದಿರದಿಂದ ದಿಕ್ಕೆಟ್ಟು ಪರಾರಿಯಾಗಿದ್ದಾರೆ. ನಿರ್ಗಮನ ದ್ವಾರ ಓಪನ್ ಮಾಡದೇ ಸಿಬ್ಬಂದಿ ನಿರ್ಲಕ್ಷ್ಯದಿಂದ ಪಟಾಕಿಗಳ ಸಿಡಿತದಿಂದ ಹಲವರಿಗೆ ಗಾಯವಾಗಿದ್ದು,ಭಾರೀ ಅನಾಹುತದಿಂದ ಪರಾಗಿದ್ದಾರೆ .

 

 

 

RELATED ARTICLES

Related Articles

TRENDING ARTICLES