Friday, January 24, 2025

ದೇವೇಗೌಡರು ತುಂಬಾ ಖುಷಿ ಪಟ್ಟರು, ಬಹಳ ಹೆಮ್ಮೆ ಪಟ್ಟರು : ಬಿ.ವೈ. ವಿಜಯೇಂದ್ರ

ಬೆಂಗಳೂರು : ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ ಅವರ ‌ಆಶೀರ್ವಾದ ಪಡೆಯಲು ಬಂದಿದ್ದೆ. ದೇವೇಗೌಡರು ತುಂಬಾ ಖುಷಿ ಪಟ್ಟರು, ಅವ್ರು ಬಹಳ ಹೆಮ್ಮೆ ಪಟ್ಟರು ಎಂದು ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹರ್ಷ ವ್ಯಕ್ತಪಡಿಸಿದರು.

ದೇವೇಗೌಡರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಕ್ಕ ವಯಸ್ಸಿಗೆ ರಾಷ್ಟ್ರೀಯ ಪಕ್ಷದ ಜವಾಬ್ದಾರಿ ‌ಸಿಕ್ಕಿದೆ ಅಂದರು. ಜೆಡಿಎಸ್ ಹಾಗೂ ಬಿಜೆಪಿ ಎರಡೂ ಒಟ್ಟಿಗೆ ಕೆಲಸ ಮಾಡಬೇಕು. ಏನೇ ಇದ್ದರೂ ಸರಿ ಮಾಡಿಕೊಂಡು ಹೋಗಬೇಕು ಎಂದಿದ್ದಾರೆ. ಅವರ ಹೋರಾಟದ ದಿನಗಳನ್ನು ನೆನಪು ಮಾಡಿಕೊಂಡರು. ಹೋರಾಟ ಅಂದಾಗ ದೇವೇಗೌಡರು, ಯಡಿಯೂರಪ್ಪ ಅವರು ನೆನಪಾಗುತ್ತಾರೆ ಎಂದು ಸ್ಮರಿಸಿದರು.

ಮಾಜಿ ಪ್ರಧಾನ ಮಂತ್ರಿಗಳು, ದೇವೇಗೌಡರನ್ನು ಇವತ್ತು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದೇನೆ. ನಿಮ್ದು ಒಂದು ದೊಡ್ಡ ರಾಷ್ಟ್ರೀಯ ಪಕ್ಷ, ಇಂತಹ ಪಕ್ಷದಲ್ಲಿ ಕಿರಿಯವನಾದ ನಿನಗೆ ನರೇಂದ್ರ ಮೋದಿಯವರು ಅವಕಾಶ ಕೊಟ್ಟಿದ್ದಾರೆ. ತಂದೆಯವರಂತೆ ನೀನು ಯಶಸ್ಸು ಕಾಣುತ್ತೀಯಾ, ಅವರ ದಾರಿಯಲ್ಲಿ ಹೋಗು. ನಿನಗೂ ಒಳ್ಳೆಯ ಯಶಸ್ಸು ಸಿಗುತ್ತದೆ ಎಂದಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಒಗ್ಗಟ್ಟಾಗಿ ಹೋಗುವಂತೆ ಸಲಹೆ ನೀಡಿದ್ದಾರೆ ಎಂದು ಹೇಳಿದರು.

ಹೋರಾಟ ಅಂದ್ರೆ ನೆನಪು ಆಗೋದೇ ಅವ್ರು

ದೇವೇಗೌಡ ಅವರ ಮಾತಿಂದ ನನಗೆ ತುಂಬಾ ಸಂತೋಷ ಆಯ್ತು. ಭೇಟಿ ವೇಳೆ‌ ಅವರ ಹೋರಾಟ ಮತ್ತು ನಮ್ಮ ತಂದೆಯವr ಹೋರಾಟಗಳನ್ನು ನೆನಪು ಮಾಡಿಕೊಂಡ್ರು. ಪಾದಯಾತ್ರೆ ಮತ್ತು ಹೋರಾಟ ಅಂದರೆ ನೆನಪು ಆಗೋದೇ ಎರಡು ಹೆಸರು. ಅದು ಯಡಿಯೂರಪ್ಪ ಹಾಗೂ ದೇವೇಗೌಡ್ರು ಹೆಸರು. ಅವರ ಸಲಹೆಗಳನ್ನು ನಾನು ಅಳವಡಿಸಿಕೊಂಡು ಪಕ್ಷದಲ್ಲಿ ಕೆಲಸ ಮಾಡ್ತೀನಿ ಎಂದು ತಿಳಿಸಿದರು.

ಮೈತ್ರಿ ಮಾತುಕತೆ ಕುರಿತು ಕುಮಾರಸ್ವಾಮಿ ಜೊತೆ ರಾಷ್ಟ್ರೀಯ ನಾಯಕರ ಭೇಟಿ ಮಾಡುವ ವಿಚಾರ‌ ಕುರಿತು ಪ್ರತಿಕ್ರಿಯಿಸಿದ ಅವರು, ಇಲ್ಲ ಅದರ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ ಎಂದು ವಿಜಯೇಂದ್ರ ಮಾಹಿತಿ ನೀಡಿದರು.

RELATED ARTICLES

Related Articles

TRENDING ARTICLES