Monday, December 23, 2024

ದೀಪಾವಳಿ ಭವಿಷ್ಯ : ಮಕರ, ಮೀನ, ಮೇಷ ಸೇರಿ ಈ ರಾಶಿಯವರಿಗೆ ಬಂಪರ್

ಬೆಂಗಳೂರು : ಬೆಳಕಿನ ಹಬ್ಬ ದೀಪಾವಳಿ ಕೆಲ ರಾಶಿಯ ಜನರಿಗೆ ಭಾರಿ ಲಾಭ ತಂದುಕೊಡಲಿದೆ ಎಂದು ಜ್ಯೋತಿಷ್ಯ ಶಾಸ್ತ್ರಜ್ಞರು ಹೇಳುತ್ತಾರೆ.

ಅಮಾವಾಸ್ಯೆ ಬಳಿಯ ಗ್ರಹಗಳ ಸಂಚಾರದಲ್ಲಿ ವ್ಯತ್ಯಾಸವಾಗುವುದರಿಂದ ಮೇಷ, ಧನು, ಮಕರ, ಕನ್ಯಾ, ಕುಂಭ ಹಾಗೂ ಮೀನ ರಾಶಿಗೆ ಸುಖ ಫಲಗಳು ಪ್ರಾಪ್ತಿಯಾಗುತ್ತವೆ ಎಂದು ತಿಳಿಸಿದ್ದಾರೆ.

ಇನ್ನೂ ವೃಷಭ, ಮಿಥುನ, ಸಿಂಹ, ತುಲಾ ಹಾಗೂ ವೃಶ್ಚಿಕ ರಾಶಿಯಲ್ಲಿ ಜನಿಸದವರು ಆರೋಗ್ಯ ಸೇರಿದಂತೆ ಎಲ್ಲಾ ವಿಚಾರಗಳಲ್ಲೂ ಹೆಚ್ಚು ಜಾಗೃತೆಯಿಂದ ಇರಬೇಕು ಎಂದು ಜ್ಯೋತಿಷ್ಯ ಪಂಡಿತರು ಸಲಹೆ ನೀಡಿದ್ದಾರೆ.

ವೃಷಭ : ಯಾರ ಬೆಂಬಲವನ್ನು ಬಯಸದೇ ಸ್ವತಂತ್ರವಾಗಿ ಕೆಲಸವನ್ನು ಮಾಡುವಿರಿ. ಬರಬೇಕಿದ್ದ ಹಣವು ಬಹಳ ದಿನವಾದರೂ ಬಾರದೇ ಇದ್ದುದು ಚಿಂತೆಯಾಗುವುದು.

ಮಿಥುನ : ಚಿಂತೆಯು ನಿಮ್ಮ ದಿನವನ್ನು ಹಾಳು ಮಾಡುವ ಸಾಧ್ಯತೆ. ಪ್ರಯಾಣದ ಅನಿವಾರ್ಯತೆ ಇದ್ದರೆ ಸ್ವಂತ ವಾಹನದಲ್ಲಿ ಪ್ರಯಾಣ ಮಾಡಿ.

ಕರ್ಕ : ಕುಟುಂಬದ ಜವಾಬ್ದಾರಿ ನಿಮ್ಮ ಮೇಲೇ ಬರಬಹುದು‌. ಆರ್ಥಿಕ ನೆರವನ್ನು ನೀಡಿದವರಿಗೆ ಕೃತಜ್ಞತೆಯನ್ನು ಸಲ್ಲಿಸಿ. ಅವಿವಾಹಿತರಿಗೆ ವಿವಾಹದ ಬಗ್ಗೆ ಚಿಂತೆ.

ಸಿಂಹ : ಆಭರಣ ಖರೀದಿಸಲು ಮುಂದಾಗುವಿರಿ. ಇಂದು ಕೋಪವು ಬಂದರೂ ವ್ಯಕ್ತಪಡಿಸದೇ ಸುಮ್ಮನಿದ್ದು ನುಂಗಿಕೊಳ್ಳುವಿರಿ.

ಕನ್ಯಾ : ಕೃಷಿಗೆ ಸಂಬಂಧಿಸಿದ ನೂತನ ಅನ್ವೇಷಣೆ ಬಗ್ಗೆ ಹೊಸ ಆಲೋಚನೆ. ಇಷ್ಟವಿಲ್ಲದಿದ್ದರೂ ಕೆಲವನ್ನು ಮಾಡಬೇಕಾಗುವುದು.

ತುಲಾ: ಅವಶ್ಯಕ ವಸ್ತುಗಳನ್ನು ಕಳೆದುಕೊಳ್ಳುವಿರಿ‌. ಪ್ರೇಮಿಯನ್ನು ಬಹಳ ಜೋಪಾನವಾಗಿ ನೋಡಿಕೊಳ್ಳಬೇಕಾಗುವುದು.

ವೃಶ್ಚಿಕ : ಪ್ರತಿಫಲದ ನಿರೀಕ್ಷೆ ಇಲ್ಲದೇ ನೀವು ಸ್ನೇಹಿತನಿಗೆ ಸಹಾಯವನ್ನು ಮಾಡುವಿರಿ. ಮಾತಿನಿಂದ ಇನ್ನೊಬ್ಬರು ನಿಮ್ಮನ್ನು ದ್ವೇಷಿಸುವರು.

ಧನು : ನಿಮ್ಮ ಸ್ವಂತ ಕೆಲಸಗಳಿಗೆ ಸಮಯವನ್ನು ಕೊಡಿ. ಮಕ್ಕಳ ಶ್ರಮದಿಂದ ಪೋಷಕರಿಗೆ ನೆಮ್ಮದಿ.

ಮಕರ : ಶಿಕ್ಷಕ ವೃತ್ತಿಯವರು ಉನ್ನತ ಸ್ಥಾನದ ನಿರೀಕ್ಷೆಯಲ್ಲಿ ಇರುವರು. ಪೋಷಕರ ಜೊತೆ ಬಹಳ ದಿನಗಳ ನಂತರ ಹರಟೆ.

ಕುಂಭ : ಆದಾಯದ ಮೂಲದಲ್ಲಿ ಸಮಸ್ಯೆ. ಆರೋಗ್ಯದಲ್ಲಿ ಹೆಚ್ಚಿನ ವ್ಯತ್ಯಾಸ. ಅನಗತ್ಯ ಖರ್ಚುಗಳ ಬಗ್ಗೆ ಗಮನವಿರಲಿ.

ಮೀನ : ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹಿನ್ನಡೆಯಾಗುವುದು. ನಿಮ್ಮ ಮಾತು ಇನ್ನೊಬ್ಬರಿಗೆ ಸಿಟ್ಟು ಬರುವಂತೆ ಮಾಡುವುದು.

RELATED ARTICLES

Related Articles

TRENDING ARTICLES