Sunday, November 3, 2024

ಸಲಾಂ..! ಬೀದಿಬದಿ ನಿರಾಶ್ರಿತರಿಗೆ ಸಹಾಯ ಮಾಡಿ ಮಾನವೀಯತೆ ಮೆರೆದ ಅಫ್ಘಾನ್ ಕ್ರಿಕೆಟಿಗ

ಅಹಮದಾಬಾದ್‌ : ಅಫ್ಘಾನ್ ಸ್ಟಾರ್ ಬ್ಯಾಟರ್ ಅಹಮದಾಬಾದ್‌ ಬೀದಿಬದಿಯಲ್ಲಿದ್ದ ನಿರ್ಗತಿಕರಿಗೆ ಹಣ ಕೊಟ್ಟು ಸಹಾಯ ಮಾಡಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ಏಕದಿನ ವಿಶ್ವಕಪ್‌-2023ಗಾಗಿ ಭಾರತದಲ್ಲಿರುವ ಅಫ್ಘಾನಿಸ್ತಾನದ ವಿಕೆಟ್‌ಕೀಪರ್ ಮತ್ತು ಬ್ಯಾಟ್ಸ್​ಮ್ಯಾನ್​ ಆಗಿರುವ ರಹಮಾನುಲ್ಲಾ ಗುರ್ಬಾಜ್ ದೀಪಾವಳಿಯ ಸಂದರ್ಭದಲ್ಲಿ ಅಹಮದಾಬಾದ್‌ನ ನಿರಾಶ್ರಿತ ಮತ್ತು ನಿರ್ಗತಿಕರಿಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಅಫ್ಘಾನಿಸ್ತಾನ ಏಕದಿನ ವಿಶ್ವಕಪ್‌ನಲ್ಲಿ ತನ್ನ ಅದ್ಭುತ ಪ್ರದರ್ಶನದ ಮೂಲಕ ಕ್ರಿಕೆಟ್ ಪ್ರೇಮಿಗಳ ಹೃದಯ ಗೆದ್ದಿತ್ತು. ತಂಡವು ಹಶ್ಮತುಲ್ಲಾ ಶಾಹಿದಿ ನೇತೃತ್ವದ ತಂಡವು ಮಾಜಿ ಚಾಂಪಿಯನ್ ಇಂಗ್ಲೆಂಡ್, ಪಾಕಿಸ್ತಾನ ಮತ್ತು ಶ್ರೀಲಂಕಾವನ್ನು ಸೋಲಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿತ್ತು. ಇನ್ನೂ, ವಿಶ್ವಕಪ್ ಟೂರ್ನಿಯಲ್ಲಿ 9 ಪಂದ್ಯಗಳನ್ನು ಆಡಿರುವ ರಹಮಾನುಲ್ಲಾ ಗುರ್ಬಾಜ್ ಎರಡು ಅರ್ಧಶತಕ ಸಿಡಿಸಿ, ಒಟ್ಟು 280 ರನ್ ಗಳಿಸಿದ್ದಾರೆ.

ಮ್ಯಾಕ್ಸ್ ವೆಲ್ ಮಾರಕ ಪ್ರದರ್ಶನದಿಂದಾಗಿ ಗೆಲುವಿನ ಹೊಸ್ತಿಲಲ್ಲಿದ್ದ ಅಫ್ಘಾನಿಸ್ತಾನ ತಂಡ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಸೋಲುಂಡಿತು. ಇದರ ಹೊರತಾಗಿಯೂ ಅವರ ಹೋರಾಟದ ಮನೋಭಾವ ಅಭಿಮಾನಿಗಳ ಮನಗೆದ್ದಿದ್ದು, ಹಿಂದುಗಳು ಆಚರಿಸುವ ದೀಪಾವಳಿ ಸಂದರ್ಭಕ್ಕೆ ರಹಮಾನುಲ್ಲಾ ಗುರ್ಬಾಜ್ ನಿರ್ಗತಿಕರಿಗೆ ಹಣ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಬಲಿಷ್ಠ ತಂಡಗಳಿಗೆ ಸೋಲುಣಿಸಿದ ಅಫ್ಘಾನ್

ವಿಶ್ವಕಪ್-2023 ಟೂರ್ನಿಯಲ್ಲಿ ಒಂದು ಪಂದ್ಯಗಳನ್ನು ಆಡಿರುವ ಅಫ್ಘಾನಿಸ್ತಾನ ತಂಡ 4 ಪಂದ್ಯಗಳನ್ನು ಗೆದ್ದು, 5 ಪಂದ್ಯಗಳಲ್ಲಿ ಸೋಲು ಕಂಡಿದೆ. ಒಟ್ಟು 8 ಅಂಕಗಳೊಂದಿಗೆ ಪಾಯಿಂಟ್ಸ್​ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಹಾಲಿ ಚಾಂಪಿಯನ್ಸ್​ ಇಂಗ್ಲೆಂಡ್ ವಿರುದ್ಧ 69 ರನ್​ಗಳಿಂದ ಜಯ ಗಳಿಸಿತ್ತು. ಪಾಕಿಸ್ತಾನ ವಿರುದ್ಧ 8 ವಿಕೆಟ್​ಗಳ ಜಯ, ಶ್ರೀಲಂಕಾ ವಿರುದ್ಧ 7 ವಿಕೆಟ್​ಗಳ ಜಯ ಹಾಗೂ ನೆದರ್ಲೆಂಡ್ಸ್​ ವಿರುದ್ಧ 7 ವಿಕೆಟ್​ಗಳ ಗೆಲುವು ದಾಖಲಿಸಿತು. ಸ್ವಲ್ಪದರಲ್ಲೇ ಸೆಮಿಸ್ ಅವಕಾಶವನ್ನು ಮಿಸ್ ಮಾಡಿಕೊಂಡು ವಿಶ್ವಕಪ್ ಅಭಿಯಾನ ಮುಗಿಸಿತು.

RELATED ARTICLES

Related Articles

TRENDING ARTICLES