ಬೆಂಗಳೂರು : ಬಿಜೆಪಿ ಜೊತೆ ಜೆಡಿಎಸ್ ವಿಲೀನ ಪ್ರಶ್ನೆಯೇ ಇಲ್ಲ. ಎನ್ಡಿಎಗೆ ಬೆಂಬಲ ಹಾಗೂ ಎನ್ಡಿಎ ಜೊತೆ ಇದ್ದೇವೆ ಅಷ್ಟೇ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿ.ವೈ. ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿರುವುದನ್ನು ನಾನು ಸ್ವಾಗತ ಮಾಡುತ್ತೇನೆ. ನಮ್ಮ ಉದ್ದೇಶ ಇರೋದು ಇಂತಹ ಕೆಟ್ಟ ಸರ್ಕಾರ ತೆಗೆಯೋಕೆ. ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ವಿಪಕ್ಷ ನಾಯಕ ಆಯ್ಕೆ ಬಗ್ಗೆ ಅವ್ರು ಹೇಳಿದ್ದಾರೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ನಾಯಕರು ನಿಮ್ಮ ಮನೆ ಹಾಳು ಮಾಡ್ತಾರೆ. ನಾನು ಇಲ್ಲಿಂದಲೇ ಅವರಿಗೆ ಹೇಳ್ತೇನೆ. ಅಲ್ಲಿನ ಪರಿಸ್ಥಿತಿಯನ್ನು ನಾನು ಹೋಗಿ ನೋಡಿಲ್ಲ. ಅಲ್ಲಿನ ರಾಜ್ಯದ ಜನರಿಗೆ ಕಾಂಗ್ರೆಸ್ ನವರು ಮಂಕು ಬೂದಿ ಎರೆಚೆ ಗೆಲ್ಲಲು ಹೊರಟಿದ್ದಾರೆ ಎಂದು ತೆಲಂಗಾಣ ರಾಜ್ಯದ ಜನರಿಗೆ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
ಸಿಎಂ, ಡಿಸಿಎಂಗೆ ಟಾರ್ಗೆಟ್ ಕೊಟ್ಟಿದ್ದಾರೆ
ಕಾಂಗ್ರೆಸ್ ಹೈಕಮಾಂಡ್ ಸಿಎಂ, ಡಿಸಿಎಂ ಹಾಗೂ ಮಂತ್ರಿಗಳಿಗೆ ಟಾರ್ಗೆಟ್ ಕೊಟ್ಟಿದ್ದಾರೆ. ಯಾರು ಹೆಚ್ಚಿಗೆ ಹಣ ಕೊಡ್ತಾರೆ ಅವರು ಮುಂದುವರಿಯುತ್ತಾರೆ. ಯಾರು ಕೊಡಲ್ಲಾ ಅವರು ಮಂತ್ರಿಗಳಾಗಿರೊಲ್ಲ. ಹೆಚ್ಚು ಹಣ ಕೊಟ್ಟು ಅವರು ಅಧಿಕಾರದಲ್ಲಿ ಇರ್ತಾರೆ. ಯಾವುದೇ ಪವರ್ ಶೇರಿಂಗ್ ಇಲ್ಲ, ಯಾರು ಹಣ ಕೊಡ್ತಾರೆ ಅವರು ಅಧಿಕಾರದಲ್ಲಿ ಇರ್ತಾರೆ. ಈಗಾಗಲೇ ಹೈಕಮಾಂಡ್ ಇದನ್ನೇ ಹೇಳಿದೆ ಎಂದು ಕಾಂಗ್ರೆಸ್ ವಿರುದ್ಧ ಹೆಚ್ಡಿಕೆ ವಾಗ್ದಾಳಿ ನಡೆಸಿದ್ದಾರೆ.