ಬೆಂಗಳೂರು : ಕ್ಲಾಸ್ ಪ್ರೇಯರ್ ಅಯ್ಯರ್ ಹಾಗೂ ಕನ್ನಡಿಗ ರಾಹುಲ್ ಶತಕದ ಆರ್ಭಟ. ಯಂಗ್ ಗನ್ ಗಿಲ್, ಹಿಟ್ ಮ್ಯಾನ್ ರೋಹಿತ್, ರನ್ ಮೆಷಿನ್ ಕೊಹ್ಲಿ ಡಚ್ಚರ ವಿರುದ್ಧ ಬೃಹತ್ ಮೊತ್ತ ಕಲೆಹಾಕಿದ ಭಾರತ.
ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆದರ್ಲೆಂಡ್ಸ್ ವಿರುದ್ಧ ನಡೆಯುತ್ತಿರುವ ವಿಶ್ವಕಪ್ ಪಂದ್ಯದಲ್ಲಿ ಭಾರತ ಬೃಹತ್ ಮೊತ್ತೆ ದಾಖಲಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 50 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 410 ರನ್ ಗಳಿಸಿದೆ.
ಭಾರತದ ಪರ ಶ್ರೇಯಸ್ ಅಯ್ಯರ್ ಹಾಗೂ ಕನ್ನಡಿಗ ಕೆ.ಎಲ್. ರಾಹುಲ್ ಅಬ್ಬರಿಸಿ ಬೊಬ್ಬಿರಿದರು. ಅಯ್ಯರ್ 94 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 10 ಬೌಂಡರಿ ನೆರವಿನೊಂದಿಗೆ ಅಜೇಯ 128* ರನ್ ಸಿಡಿಸಿದರು. ತವರು ಅಂಗಳದಲ್ಲಿ ವಿಧ್ವಂಸಕ ಬ್ಯಾಟಿಂಗ್ ಪ್ರದರ್ಶಿಸಿದ ಕೆ.ಎಲ್ ರಾಹುಲ್ 64 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 11 ಬೌಂಡರಿಗಳ ನೆರವಿನೊಂದಿಗೆ 102 ರನ್ ಚಚ್ಚಿದರು.
ಅಬ್ಬರಿಸಿದ ಗಿಲ್, ಕೊಹ್ಲಿ, ರೋಹಿತ್
ಇದಕ್ಕೂ ಮೊದಲು ಇನ್ನಿಂಗ್ಸ್ ಆರಂಭಿಸಿದ ನಾಯಕ ರೋಹಿತ್ ಶರ್ಮಾ, ಶುಭ್ಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿ ನೆದರ್ಲೆಂಡ್ಸ್ ಬೌಲರ್ಗಳನ್ನು ಮನಬಂದಂತೆ ದಂಡಿಸಿದರು. ಹಿಟ್ ಮ್ಯಾನ್ ರೋಹಿತ್ ಶರ್ಮಾ 61, ಶುಭ್ಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿ 51 ರನ್ ಗಳಿಸಿದರು. ನೆದರ್ಲೆಂಡ್ಸ್ ಪರ ಲೀಡೆ 2, ಮೀಕೆರನ್, ಮೆರ್ವೆ ತಲಾ ಒಂದು ವಿಕೆಟ್ ಪಡೆದರು.