ಚಾಮರಾಜನಗರ: ತಾವು ಈ ದೀಪಾವಳಿಯಲ್ಲಿ ಪಟಾಕಿ ಹಚ್ಚದೇ, ದೀಪ ಬೆಳಗಿ ಪರಿಸರ ದೀಪಾವಳಿ ಆಚರಿಸುತ್ತೇವೆ ಎಂದು ಸರ್ಕಾರಿ ಶಾಲಾ ಮಕ್ಕಳು ಪ್ರತಿಜ್ಞೆ ಮಾಡಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಹೊಂಗಹಳ್ಳಿ ಶಾಲಾ ಮಕ್ಕಳು ಪಟಾಕಿ ಹಚ್ಚುವುದಿಲ್ಲವೆಂದು ಪ್ರತಿಜ್ಞೆ ಮಾಡಿದ್ದಾರೆ. ದೀಪಾವಳಿ ಹಬ್ಬದಲ್ಲಿ ಪಟಾಕಿ ಹಚ್ಚದೆ ನೆಲ ಮಾಲಿನ್ಯ, ಜಲ ಮಾಲಿನ್ಯ,ಶಬ್ಧ ಮಾಲಿನ್ಯ ವಾಯು ಮಾಲಿನ್ಯ ತಡೆಗಟ್ಟುತ್ತೇವೆಂದು ಹಾಗೂ ನಮ್ಮ ನಮ್ಮ ಮನೆಗಳಲ್ಲಿ ಮಣ್ಣಿನ ದೀಪಗಳನ್ನು ಹಚ್ಚಿ ಮನೆ ಮನಗಳನ್ನು ಬೆಳಗುವ ಮೂಲಕ ಹಸಿರು ದೀಪಾವಳಿ, ಸ್ವಾಸ್ಥ್ಯ ದೀಪಾವಳಿ, ಹಾಗೂ ಪರಿಸರ ಸ್ನೇಹಿ ದೀಪಾವಳಿ ಹಬ್ಬವನ್ನು ಆಚರಿಸುವ ಮೂಲಕ ಪರಿಸರ ಸಂರಕ್ಷಣೆ ಮಾಡುತ್ತೇವೆಂದು ಧೃಢ ನಿಲುವು ಮಾಡಿದ್ದಾರೆ.
ಇದನ್ನೂ ಓದಿ: ಸ್ಯಾಂಡಲ್ವುಡ್ ಸ್ವೀಟಿ ರಾಧಿಕಾ ಕುಮಾರಸ್ವಾಮಿಗೆ ಬರ್ತ್ ಡೇ ಸಂಭ್ರಮ!
ಶಾಲೆಯಲ್ಲಿ ಸುಮಾರು ಏಳು ವರ್ಷಗಳಿಂದಲೂ ಪ್ರತಿ ವರ್ಷ ಹಬ್ಬದ ಒಂದು ವಾರ ಮುಂಚಿತವಾಗಿ ಪ್ರತಿ ನಿತ್ಯ ಪ್ರಾರ್ಥನಾ ಸಮಯದಲ್ಲಿ ಪ್ರತಿಜ್ಞೆ ಮಾಡಿಸಲಾಗುತ್ತದೆ. ಹಾಗೂ ಪಟಾಕಿ ಬಳಸುವುದರಿಂದ ಆಗಬಹುದಾದ ಅಪಾರ ಹಾನಿ ಬಗ್ಗೆ ಅರಿವು ಮೂಡಿಸಲಾಗುತ್ತಿದ್ದು, ಯಾವುದೇ ಮಕ್ಕಳು ಪಟಾಕಿ ಬಳಸದೆ ಪರಿಸರ ಸಂರಕ್ಷಣೆ ಮಾಡುತ್ತಿರುವುದು ಹೆಮ್ಮೆ ಹಾಗೂ ಇತರರಿಗೆ ಮಾದರಿ ಕೆಲಸ ಈ ಶಾಲೆ ಮಾಡುತ್ತಿದೆ.