Wednesday, January 22, 2025

ಸಿದ್ದರಾಮಯ್ಯ ಬಸವಣ್ಣರ ಹೆಸರು ಹೇಳಬಾರದು : ಜಿ.ಟಿ ದೇವೇಗೌಡ ಹೀಗೆ ಹೇಳಿದ್ದೇಕೆ ನೋಡಿ

ಮೈಸೂರು : ಜಗಜ್ಯೋತಿ ಬಸವಣ್ಣನವರು ಕಾಯಕ ಮಾಡಿ ಅಂದರು. ಸಿಎಂ ಸಿದ್ದರಾಮಯ್ಯ ಕಾಯಕ ಬೇಡ, ತಾವು ಫ್ರೀ ಕೊಟ್ಟಿದ್ದು ತಗೊಂಡು ಮಲಗಿ ಅಂತ ಹೇಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಜಿ.ಟಿ. ದೇವೇಗೌಡ ಕುಟುಕಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ಬಸವಣ್ಣ ಹೆಸರು ಹೇಳಬಾರದು. ಕಾಯಕ ಮಾಡುವವರನ್ನು ಮಲಗಿ ಅರಾಮಾಗಿ ಇರಿ ಅಂತಾ ಸಿದ್ದರಾಮಯ್ಯ ಮಲಗಿಸಿ ಬಿಟ್ಟಿದ್ದಾರೆ ಎಂದು ಕಿಡಿಕಾರಿದ್ದಾರೆ.

ರಾಜ್ಯದಲ್ಲಿ ಬರ ತಾಂಡವವಾಡುತ್ತಿದೆ, ಬರದ ಪರಿಹಾರವನ್ನು ಕಾಂಗ್ರೆಸ್​ ಸರ್ಕಾರ ಕೊಟ್ಟಿಲ್ಲ. ವಿಧಾನಸಭಾ ಅಧಿವೇಶನಕ್ಕೆ ರೈತರು ಮುತ್ತಿಗೆ ಹಾಕುವುದು ಖಚಿತವಾಗಿದೆ. ನಾವು ಕೂಡ ಬಿಜೆಪಿ ಜೊತೆ ಸೇರಿ ವಿಧಾನಸಭಾ ಅಧಿವೇಶನದಲ್ಲಿ ಪ್ರತಿಭಟನೆ ಮಾಡ್ತಿವಿ. ಪ್ರಧಾನಿ ನರೇಂದ್ರ ಮೋದಿಯವರ ಕಡೆಗೆ ಸಿಎಂ ಸಿದ್ದರಾಮಯ್ಯ ಕೈ ತೋರಿಸುವುದು ಬಿಡಬೇಕು. ಏಕವಚನದಲ್ಲಿ ಮೋದಿ ಅವರನ್ನು ಬೈಯುವುದು ಬಿಟ್ಟು ವಿಶ್ವಾಸದಿಂದ ಕೇಳಿ ಪರಿಹಾರ ತರಿಸಿ ಎಂದು ಚಾಟಿ ಬೀಸಿದ್ದಾರೆ.

ಬಿಜೆಪಿ ನಾಯಕರನ್ನು ಲೆಕ್ಕಕ್ಕೆ ಇಟ್ಟುಕೊಂಡಿಲ್ಲ

ಬರ ಪರಿಹಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಲು ನಮ್ಮ ಸರ್ಕಾರ ಸರ್ವಪಕ್ಷಗಳ ನಿಯೋಗವನ್ನು ಕರೆದೊಯ್ಯಲು ಸಿದ್ಧವಿದೆ. ತಮ್ಮದೇ ಪಕ್ಷಕ್ಕೆ ಸೇರಿರುವ ಪ್ರಧಾನಿಯನ್ನು ಭೇಟಿ ಮಾಡುವ ಧೈರ್ಯ ರಾಜ್ಯದ ಬಿಜೆಪಿ ನಾಯಕರಲ್ಲಿ ಇಲ್ಲ. ಕೇಂದ್ರದ ಬಿಜೆಪಿ ನಾಯಕರು ಕೂಡಾ ರಾಜ್ಯದ ಬಿಜೆಪಿ ನಾಯಕರನ್ನು ಲೆಕ್ಕಕ್ಕೆ ಇಟ್ಟುಕೊಂಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಕುಟುಕಿದ್ದಾರೆ.

RELATED ARTICLES

Related Articles

TRENDING ARTICLES