Monday, December 23, 2024

ವಿಕೆಟ್ ಪಡೆದ ಕಿಂಗ್ ಕೊಹ್ಲಿ, ಖುಷಿಯಲ್ಲಿ ಕುಣಿದು ಕುಪ್ಪಳಿಸಿದ ಅನುಷ್ಕಾ

ಬೆಂಗಳೂರು : ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆದರ್ಲೆಂಡ್ಸ್​ ವಿರುದ್ಧ ನಡೆದ ಪಂದ್ಯದಲ್ಲಿ ಭಾರತದ ಕ್ಲಾಸ್ ಬ್ಯಾಟರ್ ವಿರಾಟ್ ಕೊಹ್ಲಿ ಬೌಲಿಂಗ್​ನಲ್ಲೂ ಮಿಂಚಿದ್ದು, ಒಂದು ವಿಕೆಟ್ ಕಬಳಿಸಿದರು.

ನೆದರ್ಲೆಂಡ್ಸ್​ ತಂಡದ ನಾಯಕ ಎಡ್ವರ್ಡ್ಸ್ ವಿಕೆಟ್ ಪಡೆದ ತಕ್ಷಣ ಪತ್ನಿ ಅನುಷ್ಕಾ ಹಾಗೂ ಕೊಹ್ಲಿ ಫ್ಯಾನ್ಸ್ ಸಂಭ್ರಮಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಪೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ.

ಇನ್ನಿಂಗ್ಸ್​ನ 23ನೇ ಓವರ್ ಬೌಲ್​ ಮಾಡಿದ ಕೊಹ್ಲಿ 7 ರನ್ ನೀಡಿದರು. ಈ ವೇಳೆ ಮೈದಾನದಲ್ಲಿ ನೆರೆದಿದ್ದ ಅಭಿಮಾನಿಗಳು ವಿರಾಟ್ ಪರ ಘೋಷಣೆ ಕೂಗಿ ಅಭಿಮಾನದ ಹೊಳೆಯಲ್ಲಿ ಮಿಂದಿದ್ದರು. 25ನೇ ಓವರ್​ನಲ್ಲಿ ತಮ್ಮ ಎರಡನೇ ಓವರ್​ನಲ್ಲಿ ಒಂದು ವಿಕೆಟ್ ಕೂಡ ಪಡೆದರು. ಇದಕ್ಕೂ ಮುನ್ನ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಗಾಯಗೊಂಡಿದ್ದ ವೇಳೆ ಕೊಹ್ಲಿ ಬೌಲಿಂಗ್ ಮಾಡಿ ಗಮನ ಸೆಳೆದಿದ್ದರು.

ವಿರಾಟ್ ಕೊಹ್ಲಿ ಈವರೆಗೆ ಏಕದಿನ ಪಂದ್ಯಗಳಲ್ಲಿ 9 ವಿಕೆಟ್ ಪಡೆದಿದ್ದಾರೆ. ಏಳು ವರ್ಷಗಳ ಬಳಿಕ ಕೀಂಗ್ ಕೊಹ್ಲಿ ಅವರು 9ನೇ ವಿಕೆಟ್ ಪಡೆದಿದ್ದಾರೆ. ಇದು ಅವರ ವಿಶ್ವಕಪ್​ನ ಮೊದಲ ವಿಕೆಟ್ ಕೂಡ ಹೌದು. ಇನ್ನೂ ನಾಯಕ ರೋಹಿತ್ ಶರ್ಮಾ ಕೂಡ ಬೌಲಿಂಗ್ ಮಾಡಿ ಗಮನ ಸೆಳೆದರು. 48ನೇ ಓವರ್​ನ 5ನೇ ಎಸೆತದಲ್ಲಿ ನೆದರ್ಲೆಂಡ್ಸ್​ನ ತೇಜ ನಿಡಮನೂರು ಅವರ ವಿಕೆಟ್ ಪಡೆದರು.

 

View this post on Instagram

 

A post shared by ICC (@icc)

RELATED ARTICLES

Related Articles

TRENDING ARTICLES