Wednesday, January 22, 2025

ಸದಾನಂದ ಗೌಡರು ಮಾನಸಿಕವಾಗಿ, ದೈಹಿಕವಾಗಿ ಫಿಟ್ ಇದ್ದಾರೆ : ಪ್ರಿಯಾಂಕ್ ಖರ್ಗೆ

ಬೆಂಗಳೂರು : ಮಾಜಿ ಸಿಎಂ ಡಿ.ವಿ. ಸದಾನಂದ ಗೌಡರು ಸೇರಿದಂತೆ ಬೇರೆ ನಾಯಕರು ಸ್ವಯಂ ನಿವೃತಿ ಪಡೆದಿದ್ದಾರೆ. ಇದು ಒತ್ತಾಯದ ಸ್ವಯಂ ನಿವೃತ್ತಿ ಆಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸದಾನಂದ ಗೌಡರು ಮಾನಸಿಕವಾಗಿ, ದೈಹಿಕವಾಗಿ ಫಿಟ್ ಇದ್ದಾರೆ, ಆದರೂ ನಿವೃತ್ತಿ ಕೊಡಿಸಿದ್ದಾರೆ. ಅವರು ನೊಂದು ಪಕ್ಷವನ್ನು ಬಿಟ್ಟಿದ್ದಾರೆ ಎಂದು ಕುಟುಕಿದ್ದಾರೆ.

ಮಾಜಿ ಸಿಎಂ, ಕೇಂದ್ರ ಮಂತ್ರಿ ದೆಹಲಿಗೆ ಹೋದರು ಬಾಗಿಲು ತೆಗೆದಿಲ್ಲ. ಬಿಜೆಪಿ ವರ್ಸಸ್ ಬಿಜೆಪಿ ಆಗಿದೆ. ಬಿಜೆಪಿ ಪಕ್ಷ ಬಿಟ್ಟು ಎಷ್ಟು ಜನ ಬರ್ತಾರೆ ನೀವೆ ನೋಡಿ. ಬೂತ್ ಮಟ್ಟ, ಸಂಘದಲ್ಲಿ‌ ಕೆಲಸ ಮಾಡಿದ್ದೇನೆ, ಸಚಿವನಾಗಿದ್ದೆ. ನಾನು ಏನು ಮಾತಾಡಿದರು ತಿರುಗುಬಾಣ ಆಗಲಿದೆ ಎಂದು ತಿಳಿಸಿದ್ದಾರೆ.

ಈಗ ಈಶ್ವರಪ್ಪ ಪಕ್ಷ ಬಿಡ್ತಾರಾ?

ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಎಲ್ಲಿಗೆ ಹೋದರು? ಈಶ್ವರಪ್ಪ ನನಗೆ ಬಚ್ಚಾ ಎನ್ನುತ್ತಿದ್ದರು, ಈಗ ಹೋಗಿ ಮಂಡಿ ಊರುತ್ತೀರಾ? ಈಗ ಈಶ್ವರಪ್ಪ ಪಕ್ಷ ಬಿಡ್ತಾರಾ? ಮೊದಲು ಅವರ ಮನೆಯನ್ನ ನೋಡಿಕೊಳ್ಳಿ. ಬಿಜೆಪಿ ಲೆಕ್ಕಾಚಾರ ಏನು ಅನ್ನೋದು ಅವರಿಗೆ ಬಿಟ್ಟಿದು. ನಾವು ನಮ್ಮ ಬಲದ ಮೇಲೆ ತಂತ್ರಗಾರಿಕೆ ಮಾಡ್ತೇವೆ. ಸಮುದಾಯ ಬೆಂಬಲ ಇಲ್ಲ ಎಂದು ಒಪ್ಪಿಕೊಂಡಂಗೆ ಅಲ್ವಾ? ಎಂದು ಪ್ರಿಯಾಂಕ್ ಖರ್ಗೆ ಚಾಟಿ ಬೀಸಿದ್ದಾರೆ.

RELATED ARTICLES

Related Articles

TRENDING ARTICLES