ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಗಾಡ್ ಆಫ್ ಕ್ರಿಕೆಟ್ ಖ್ಯಾತಿಯ ಸಚಿನ್ ತೆಂಡೂಲ್ಕರ್ ಅವರ 49ನೇ ಶತಕದ ದಾಖಲೆಯನ್ನು ಹೋಲಿಕೆ ಮಾಡಬೇಡಿ ಎಂದು ಎಬಿಡಿ ವಿಲಿಯರ್ಸ್ ಹೇಳಿದ್ದಾರೆ.
ಏಕೆಂದರೆ ಕ್ರಿಕೆಟ್ ಜಗತ್ತಿನ ಇಬ್ಬರು ಲೆಜೆಂಡ್ ಗಳು ವಿಭಿನ್ನ ಕಾಲಘಟ್ಟದಲ್ಲಿ ಆಡಿದ್ದಾರೆ ಎಂದು ತಮ್ಮದೇ ಅಧಿಕೃತ ಯುಟ್ಯೂಬ್ ಚಾನೆಲ್ ನಲ್ಲಿ ಮಿಸ್ಟರ್ 360 ಹೇಳಿದ್ದಾರೆ. ನಮ್ಮಿಬ್ಬರ ನಡುವೆ ನಿಜಕ್ಕೂ ಅವಿನಾಭಾವ ಸಂಬಂಧವಿದೆ. ನಾವಿಬ್ಬರೂ ಒಡಹುಟ್ಟಿದ ಸಹೋದರರಂತಿದ್ದೇವೆ. ವಿರಾಟ್ ಆಟವನ್ನು ವೀಕ್ಷಿಸಲು ಸಂತಸ ಆಗುತ್ತದೆ.
ಇದನ್ನೂ ಓದಿ: ಚಿನ್ನಸ್ವಾಮಿ ಕ್ರೀಡಾಂಗಣ ಸುತ್ತಮುತ್ತ ಪಾರ್ಕಿಂಗ್ ನಿಷೇಧ!
ಇದು ಆಧುನಿಕ ಜಗತ್ತಾಗಿದ್ದು, ವಿರಾಟ್ ಹಾಗೂ ಸಚಿನ್ ಅವರ ಶತಕದ ಜೊತೆಗೆ ಹೋಲಿಕೆ ಮಾಡಲು ಸಾಧ್ಯವೇ ಇಲ್ಲ. ಸಚಿನ್ 451 ಇನಿಂಗ್ಸ್ ಗಳಿಸಿದ 49ನೇ ಶತಕವನ್ನು ವಿರಾಟ್ 277 ಇನಿಂಗ್ಸ್ ಗಳಲ್ಲೇ ತಲುಪಿದ್ದಾರೆ. ವಿರಾಟ್ ಕೊಹ್ಲಿ ಈ ದಾಖಲೆಯ ಮೈಲುಗಲ್ಲನ್ನು ಅತಿ ವೇಗವಾಗಿ ಮುಟ್ಟಿದ್ದಾರೆ. ಆದರೆ ಸಚಿನ್ ಅವರು ಆಡುತ್ತಿದ್ದ ಕಾಲಘಟ್ಟಕ್ಕೂ ಈಗಿನ ಕಾಲಕ್ಕೂ ತುಂಬಾ ವ್ಯತ್ಯಾಸವಿದೆ. ಆಗ 250 ರನ್ ಗಳಿಸಿದರೆ ದೊಡ್ಡ ಮೊತ್ತ ಆಗುತ್ತಿತ್ತು. ಆದರೆ ಈಗ ವಿಕೆಟ್ ತುಂಬಾ ಚೆನ್ನಾಗಿದ್ದು, 400ಕ್ಕೂ ಹೆಚ್ಚು ರನ್ ಗಳು ಹರಿದು ಬರುತ್ತಿವೆ ಎಂದು ಹೇಳಿದ್ದಾರೆ.