ದೀಪಾವಳಿ ಹಬ್ಬಕ್ಕೆ ಸಾಲು ಸಾಲು ರಜೆ: ಮೆಜೆಸ್ಟಿಕ್​ ನಲ್ಲಿ ಬಸ್​​ಗಳು ಹೌಸ್​​ಫುಲ್​​​!​

ಬೆಂಗಳೂರು: ದೀಪಾವಳಿ ಹಬ್ಬದ ಹಿನ್ನೆಲೆ ಸಾಲು-ಸಾಲು ರಜೆಗಳು ಇದ್ದು, ಇಂದು ಬೆಂಗಳೂರು ಮಂದಿ ತಮ್ಮ ಊರುಗಳ ಕಡೆ ಮುಖ ಮಾಡಿದ್ದಾರೆ.

ಹಬ್ಬದ ಹಿನ್ನೆಲೆ ಮೆಜೆಸ್ಟಿಕ್​ಗೆ ಪ್ರಯಾಣಿಕರ ದಂಡೇ ಹರಿದು ಬಂದಿದೆ. ಸೀಟ್​ ರಿಸರ್ವ್ ಮಾಡಿರುವವರು ಆರಾಮವಾಗಿ ನಿಂತಿದ್ದರೇ, ಸೀಟ್​ ರಿಸರ್ವ್​ ಮಾಡದವರು ಬಸ್​​ನಲ್ಲಿ ಸೀಟು ಹಿಡಿಯಲು ಮುಗಿಬಿದ್ದಿದ್ದಾರೆ.

ಇದನ್ನೂ ಓದಿ: ರೇಷನ್​ ಪಡೆಯದೇ ಇದ್ದರೆ ರೇಷನ್​ ಕಾರ್ಡ್​​​ ರದ್ದು!

ಇನ್ನು ಹಬ್ಬದ ಹಿನ್ನೆಲೆ ಬೆಂಗಳೂರಿನಿಂದ ಇತರ ಜಿಲ್ಲೆಗಳಿಗೆ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ  2 ಸಾವಿರ ಹೆಚ್ಚುವರಿ ಬಸ್ ಗಳ ವ್ಯವಸ್ಥೆಯನ್ನು ಸಾರಿಗೆ ಇಲಾಖೆ ಕಲ್ಪಿಸಿದೆ.​ ಆದರೂ ಸಹ ಬಸ್​ಗಳು ಫುಲ್​ ರಶ್​ ಆಗಿ ಸಂಚರಿಸುತ್ತಿವೆ. ಪ್ರಯಾಣಿಕರ ಅಗತ್ಯಕ್ಕೆ ತಕ್ಕಂತೆ KSRTC ಹೆಚ್ಚುವರಿ ಬಸ್ ಬಿಡುತ್ತಿದೆ.

ಕಳೆದ ರಾತ್ರಿಯಿಂದಲೇ  ಬೆಂಗಳೂರಿನ ಕೆಂಪೇಗೌಡ ಬಸ್​ ನಿಲ್ದಾಣದಿಂದ ಜನರು ತಮ್ಮ ತಮ್ಮ ಊರುಗಳಿಗೆ ಪ್ರಯಾಣಿಸಲು ಆಗಮಿಸುತ್ತಿದ್ದು ಇಂದು ಸಹ ಬಳ್ಳಾರಿ, ಹುಬ್ಬಳ್ಳಿ, ದಾವಣಗೆರೆ, ಗುಲ್ಬರ್ಗ ಹಾಗೂ ಶಿವಮೊಗ್ಗಕ್ಕೆ ತೆರಳಲು ಜನರು ಮೆಜೆಸ್ಟಿಕ್​ ಬಸ್​ ನಿಲ್ದಾಣದಲ್ಲಿ ಕಾದು ಕುಳಿತಿದ್ದಾರೆ.

RELATED ARTICLES

Related Articles

TRENDING ARTICLES