Saturday, May 18, 2024

ನಾಳೆ ಭಾರತ vs ನೆದರ್ಲೆಂಡ್ಸ್ ಹೈವೋಲ್ಟೇಜ್ ಪಂದ್ಯ : ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಬಿಗಿ ಬಂದೋಬಸ್ತ್

ಬೆಂಗಳೂರು : ಭಾರತ ಹಾಗೂ ನೆದರ್ಲೆಂಡ್ಸ್ ನಡುವೆ ವಿಶ್ವಕಪ್-2023 ಟೂರ್ನಿಯ ಅಂತಿಮ ಪಂದ್ಯ ಭಾನುವಾರ ನಡೆಯಲಿದ್ದು, ಹೈವೋಲ್ಟೇಜ್ ಕದನಕ್ಕೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣ ಸಜ್ಜಾಗಿದೆ.

ಶನಿವಾರದಿಂದಲೇ ಪೊಲೀಸರು ಬಿಗಿ ಭದ್ರತೆ ಕಲ್ಪಿಸಿದ್ದು, ಸಾಕಷ್ಟು ವ್ಯವಸ್ಥೆ ಮಾಡಿಕೊಂಡಿದ್ದಾರೆ. ಪಂದ್ಯ ನೋಡಲು ಬರುವ ಸಾರ್ವಜನಿಕರು ತಮ್ಮ ವಾಹನಗಳ ಪಾರ್ಕಿಂಗ್ ಎಲ್ಲಿ ಮಾಡಬೇಕು. ಸ್ಟೇಡಿಯಂ ಸುತ್ತಮುತ್ತ ಏನೆಲ್ಲಾ ನಿಷೇಧಿಸಲಾಗಿದೆ. ಈ ಕುರಿತು ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

2023ರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗಳು ಅಂತಿಮ ಘಟ್ಟ ತಲುಪಿವೆ. ಭಾನುವಾರ ಬೆಂಗಳೂರಿನಲ್ಲಿ ವಿಶ್ವಕಪ್ ಟೂರ್ನಿಯ ಕೊನೆ ಲೀಗ್ ಪಂದ್ಯ ನಡೆಯಲಿದ್ದು, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾರತ ಮತ್ತು ನೆದರ್ಲೆಂಡ್ಸ್ ತಂಡಗಳು ಸೆಣಸಾಡಲಿವೆ. ನಗರದಲ್ಲಿ ನಾಳೆ ನಡೆಯಲಿರೋ ಪಂದ್ಯಕ್ಕೆ ಸ್ಟೇಡಿಯಂ ಸುತ್ತಮುತ್ತ ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದಾರೆ.

ಗೂಡ್ಸ್ ವಾಹನಗಳ ಸಂಚಾರಕ್ಕೆ ನಿರ್ಬಂಧ

ಚಿನ್ನಸ್ವಾಮಿ ಸ್ಟೇಡಿಯಂನ ಒಳ ಮತ್ತು ಹೊರ ಭಾಗದಲ್ಲಿ ಸುಮಾರು ಒಂದು ಸಾವಿರ ಪೊಲೀಸರನ್ನ ನಿಯೋಜನೆ ಮಾಡಲಾಗಿದೆ. ಹೆಚ್ಚುವರಿ ಪೊಲೀಸ್ ಆಯುಕ್ತರ ಮೇಲುಸ್ತುವಾರಿಯಲ್ಲಿ ನಾಲ್ವರು ಡಿಸಿಪಿಗಳು ಭದ್ರತೆಯ ನೇತೃತ್ವ ವಹಿಸಿದ್ದಾರೆ. ಸ್ಟೇಡಿಯಂ ಸುತ್ತಲಿನ ಕಬ್ಬನ್ ರಸ್ತೆ ಹಾಗೂ ಕ್ವೀನ್ಸ್ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ಸಾರ್ವಜನಿಕರು ರಸ್ತೆಗಿಳಿಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ‌. ಇನ್ನೂ, ಸ್ಟೇಡಿಯಂ ಸುತ್ತಮುತ್ತ ಸಂಚಾರ ದಟ್ಟಣೆ ಕಡಿಮೆ ಮಾಡುವ ಸಲುವಾಗಿ ಈ ಮಾರ್ಗದಲ್ಲಿ ಗೂಡ್ಸ್ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದ್ದು, ಕ್ಯಾಬ್‌ಗಳಲ್ಲಿ ಬರುವ ಸಾರ್ವಜನಿಕರಿಗಾಗಿ ಕಬ್ಬನ್ ರಸ್ತೆಯಲ್ಲಿ ಡ್ರಾಪ್ ಆಂಡ್ ಪಿಕಪ್ ಪಾಯಿಂಟ್ ವ್ಯವಸ್ಥೆಯನ್ನ ಸಂಚಾರಿ ಪೊಲೀಸರು ಕಲ್ಪಿಸಿದ್ದಾರೆ.

ಐದು ಕಡೆ ಪೇ ಪಾರ್ಕಿಂಗ್ ವ್ಯವಸ್ಥೆ

ಸದ್ಯ, ಪಂದ್ಯ ನೋಡಲು ಸ್ವಂತ ವಾಹನಗಳಲ್ಲಿ ಬರುವವರಿಗೆ ಐದು ಕಡೆ ಪೇ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಶಿವಾಜಿನಗರ ಬಸ್ ನಿಲ್ದಾಣ ಸೇರಿ ಸಂಚಾರ ಪೊಲೀಸರು ಸೂಚಿಸಿದ ಸ್ಥಳಗಳಲ್ಲಿ ಸಾರ್ವಜನಿಕರು ತಮ್ಮ ತಮ್ಮ ವಾಹನಗಳನ್ನ ಪಾರ್ಕ್ ಮಾಡಬಹುದಾಗಿದೆ. ಒಟ್ಟಿನಲ್ಲಿ ನಾಳಿನ ವಿಶ್ವಕಪ್ ಲೀಗ್‌ನ ಕೊನೆ ಪಂದ್ಯಕ್ಕೆ ಸಿಲಿಕಾನ್ ಸಿಟಿ ಸಜ್ಜಾಗಿದೆ.

RELATED ARTICLES

Related Articles

TRENDING ARTICLES