Monday, December 23, 2024

ತಮ್ಮ ಮಗನಿಗಾಗಿ ದುಡಿಯುವವರು ದೇಶಕ್ಕೆ ಎಂದಿಗೂ ಒಳಿತನ್ನು ಮಾಡಲಾರರು : ಅಮಿತ್ ಶಾ

ಮಧ್ಯಪ್ರದೇಶ : ತಮ್ಮ ಮಗ ಹಾಗೂ ಹೆಣ್ಣು ಮಕ್ಕಳಿಗಾಗಿ ದುಡಿಯುವವರು ದೇಶ ಮತ್ತು ರಾಜ್ಯಕ್ಕೆ ಎಂದಿಗೂ ಒಳಿತನ್ನು ಮಾಡಲಾರರು ಎಂದು ಸೋನಿಯಾ ಗಾಂಧಿ ಹೆಸರೇಳದೆಯೇ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿದರು.

ಮಧ್ಯಪ್ರದೇಶದ ಮನವಾರದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಯಾವತ್ತೂ ಭಾರತೀಯ ಸಂಸ್ಕೃತಿಯನ್ನು ಅವಮಾನಿಸುತ್ತಲೇ ಬಂದಿದೆ ಎಂದು ಛೇಡಿಸಿದರು.

ಕಾಂಗ್ರೆಸ್ ಇಲ್ಲಿ ಕಮಲ್ ನಾಥ್​ರನ್ನು ನಾಯಕನನ್ನಾಗಿ ಮಾಡಿದೆ. ಆದರೆ, ಅವರು ನಿಮ್ಮ ಒಳ್ಳೆಯದಕ್ಕೆ ಕೆಲಸ ಮಾಡುವುದಿಲ್ಲ. ಏಕೆಂದರೆ ಅವರು ನಕುಲನಾಥ್​ರನ್ನು ಸಿಎಂ ಮಾಡಲು ಹಾಗೂ ಸೋನಿಯಾ ಗಾಂಧಿ ತನ್ನ ಪುತ್ರ ರಾಹುಲ್ ಗಾಂಧಿಯನ್ನು ಪ್ರಧಾನಿ ಮಾಡುವ ಮನಸ್ಸು ಹೊಂದಿದ್ದಾರೆ ಎಂದು ಕುಟುಕಿದರು.

ಕಾಂಗ್ರೆಸ್ ದಲಿತ ಮತ್ತು ಆದಿವಾಸಿಗಳ ವಿರೋಧಿ. ಅವರು ಇಷ್ಟು ವರ್ಷಗಳ ಕಾಲ ಅಧಿಕಾರದಲ್ಲಿದ್ದರು. ಆದರೆ, ಅವರು ಎಂದಿಗೂ ಯಾವುದೇ ಬುಡಕಟ್ಟು ಜನಾಂಗವನ್ನು ಅಧ್ಯಕ್ಷರನ್ನಾಗಿ(ರಾಷ್ಟ್ರಪತಿ) ಮಾಡಲಿಲ್ಲ. ಆರೆಸ್ಸೆಸ್‌ನ ಬಡ ಕುಟುಂಬದ ಬುಡಕಟ್ಟು ಮಗಳು ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡುವ ಮೂಲಕ ಪ್ರಧಾನಿ ಮೋದಿ ಅವರು ದೇಶದಾದ್ಯಂತ ಆದಿವಾಸಿಗಳ ಗೌರವವನ್ನು ಹೆಚ್ಚಿಸಿದರು ಎಂದು ಅಮಿತ್ ಶಾ ಹೇಳಿದರು.

ಬಟ್ಟೆಯನ್ನು ಹರಿದು ಹಾಕುವ ರಾಜಕೀಯ

ಮಧ್ಯಪ್ರದೇಶದಲ್ಲಿ ಮೂರು ಕುಟುಂಬಗಳಿವೆ. ಒಂದು ಕಮಲನಾಥ್, ಎರಡನೆಯದು ದಿಗ್ವಿಜಯ್ ಅವರ ವಿಭಜಿತ ಆಧಾರ, ಮೂರನೆಯದು ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿಯವರ ಗಾಂಧಿ ಕುಟುಂಬ. ಇಲ್ಲಿ ಮೂರು ಬಾರಿ ಕೆಲಸ ಕೆಡುತ್ತದೆ. ಇಲ್ಲಿ ಗಾಂಧಿ ಕುಟುಂಬದಿಂದ ಬಂದ ಆದೇಶಗಳನ್ನು ಮಾತ್ರ ಅನುಸರಿಸಲಾಗುತ್ತದೆ. ಕಮಲ್ ನಾಥ್ ಸೂಚನೆಗಳನ್ನು ಅನುಸರಿಸಲಾಗುತ್ತದೆ ಹಾಗೂ ಯಾವುದೇ ತಪ್ಪಿದಲ್ಲಿ ದಿಗ್ವಿಜಯ್ ಸಿಂಗ್ ಅವರಿಗೆ ಕಪಾಳಮೋಕ್ಷ ಮಾಡುತ್ತಾರೆ. ಈ ಬಟ್ಟೆಯನ್ನು ಹರಿದು ಹಾಕುವ ರಾಜಕೀಯದಿಂದ ಮಧ್ಯಪ್ರದೇಶಕ್ಕೆ ಯಾವುದೇ ಒಳಿತು ಆಗುವುದಿಲ್ಲ ಎಂದು ಲೇವಡಿ ಮಾಡಿದರು.

RELATED ARTICLES

Related Articles

TRENDING ARTICLES